ವಿದ್ಯುತ ಪ್ರತಿನಿಧಿಗಳ ಹೋರಾಟಕ್ಕೆ ಜಿಲ್ಲಾ ವೀರಶೈವ ಸಮಾಜ ಬೆಂಬಲ

ಕಲಬುರಗಿ,ಸೆ.7- ರಾಜ್ಯದ ಗ್ರಾಮ ವಿದ್ಯುತ ಪ್ರತಿನಿಧಿಗಳು ತಮ್ಮ ಸೇವೆಯನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ನಡೆಸುತ್ತೀರುವ ಹೋರಾಟಕ್ಕೆ ಕಲಬುರಗಿ ಜಿಲ್ಲಾ ವೀರಶೈವ ಸಮಾಜ ಬೆಂಬಲ ವ್ಯಕ್ತಪಡಿಸಿದೆ.
ಉಚ್ಚ ನ್ಯಾಯಾಲಯದ ಆದೇಶದಂತೆ ಗ್ರಾಮ ವಿದ್ಯುತ ಪ್ರತಿನಿಧಿಗಳನ್ನು ಖಾಯಂ ಗೊಳಿಸಬೇಕು ಈ ಬೇಡಿಕೆಗೆ ಆಗ್ರಹಿಸಿ ಪ್ರೀಡಂ ಪಾರ್ಕ್‍ನಲ್ಲಿ ಪೂಜ್ಯ ಶ್ರೀಹವಾಮಲ್ಲಿನಾಥ ಮಹಾರಾಜರ ಸಾನಿದ್ಯದಲ್ಲಿ ಮುಂದುವರೆದಿರುವ ಅನಿರ್ದಿಷ್ಟಕಾಲ ಧರಣಿ ಸತ್ಯಗ್ರಾಹ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ ಅವರು, ಬೆಂಬಲ ವ್ಯಕ್ತಪಡಿಸಿದರು.
ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತೀರುವ ಗ್ರಾಮ ವಿದ್ಯುತ ಪ್ರತಿನಿಧಿಗಳ ಸೇವೆಯನ್ನು ಖಾಯಂ ಗೊಳಿಸುವ ಮೂಲಕ ಸರ್ಕಾರ ಅವರಿಗೆ ನ್ಯಾಯಕಲ್ಪಿಸಿಕೊಡಬೇಕು, ಸರ್ಕಾರದ ಕಣ್ಣು ತೆರೆಸಲು ಗ್ರಾಮ ವಿದ್ಯುತ ಪ್ರತಿನಿಧಿಗಳು ಕೈಗೊಂಡಿರುವ ಅನಿರ್ಧಿಷ್ಟಕಾಲ ಧರಣಿ ಸತ್ಯಗ್ರಾಹವನ್ನು ಪಕ್ಷತೀತವಾಗಿ ಎಲ್ಲ ಸಂಘಟನೆಗಳು ಬೆಂಬಲಿಸುವ ಮೂಲಕ ಪೂಜ್ಯ ಹವಾಮಲ್ಲಿನಾಥ ಮಹಾರಾಜರಿಗೆ ಹಾಗೂ ಸಂಘಟನೆಗಳಿಗೆ ಶಕ್ತಿ ತುಂಬುವಂತೆ ಅವರು ಕರೆ ನೀಡಿದರು.
ಗ್ರಾಮ ವಿದ್ಯುತ ಪ್ರತಿನಿಧಿಗಳು ಕೈಗೊಂಡಿರುವ ಅವರ ಈ ಹೋರಾಟಕ್ಕೆ ರಾಜ್ಯದ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ತಮ್ಮ ಹಕ್ಕನ್ನು ಪಡೆಯಲು ಕೈಗೊಂಡಿರುವ ಅನಿರ್ಧಿಷ್ಟಕಾಲ ಧರಣಿ ಸತ್ಯಾಗ್ರಹ ಮುಂದುವರೆದಿದ್ದು, ಸರ್ಕಾರ ಕೂಡಲೇ ಇವರ ಬೇಡಿಕೆಯನ್ನು ಆಲಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.