ವಿದ್ಯುತ ದರ ಏರಿಕೆ ಖಂಡಿಸಿ ವಿಜಯಪೂರ ಬಂದ್

ವಿಜಯಪುರ:ಜೂ.23:ರಾಜ್ಯ ಸರಕಾರ ವಿದ್ಯುತ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದ್ದು ಕೈಗಾರಿಕಾ ಉದ್ದಿಮೆದಾರರಿಗೆ/ವ್ಯಾಪಾರಸ್ಥರಿಗೆ /ಗ್ರಾಹಕರಿಗೆ ಅಸಹನೀಯ ಭಾರವಾಗಿದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಔದ್ಯೋಗಿಕ ರಂಗ, ಆಯಿಲ್ ಮಿಲ್, ಜಿನ್ನಿಂಗ ಫ್ಯಾಕ್ಟರಿ ಹಾಗೂ ಇತರೆ ಕೈಗಾರಿಕಾ ಉದ್ದಿಮೆಗಳು ತುಂಬಾ ದುಬಾರಿಯಾದ ವಿದ್ಯುತ ಪರಿಷ್ಕøತ ದರಗಳಿಂದ ತತ್ತರಿಸಿ ಮುಚ್ಚುವ ದುಸ್ಥಿತಿಗೆ ಬಂದು ನಿರುದ್ಯೋಗ ಹೆಚ್ಚಾಗುವದರಲ್ಲಿ ಸಂದೇಹವಿಲ್ಲ. ಈಂಅ ದರ ರೂ 0.57 ಇದ್ದದ್ದನ್ನು ರೂ 2=55 ಮಾಡಿದ್ದು, ಐಖಿ ಕನೆಕ್ಷನಗೆ ರೂ 140 ರಿಂದ ರೂ 190 ಪ್ರತಿ ಕಿಲೋ ವ್ಯಾಟಗೆ ಹೆಚ್ಚಿಸಿದ್ದು ಅದರಂತೆ ಬೃಹತ ಕೈಗಾರಿಕೆಗಳಿಗೆ ರೂ 265 ರಿಂದ ರೂ 350 ಪ್ರತಿ ಕಿಲೋ ವ್ಯಾಟಿಗೆ ಏರಿಸಲಾಗಿದೆ. ಗೃಹ ಬಳಕೆದಾರರಿಗೆ 50ಯುನಿಟಗಳವರೆಗೆ 4=10 , 50 ರಿಂದ 100 ಯುನಿಟಿಗೆ ರೂ 5=60, 100 ಯುನಿಟದಿಂದ ರೂ 7=15 ಹಾಗೂ 200 ಯುನಿಟ ನಂತರ ರೂ 8=20 ವಿಧಿಸಿದ್ದು ಅಸಹನೀಯವಾಗಿದೆ. ಈ ಪರಿಷ್ಕøತ ವಿದ್ಯುತ ದರಗಳನ್ನು ವಿರೋಧಿಸಿ ಗುರುವಾರ ದಿನಾಂಕ 22-06-2023 ರಂದು ”ವಿಜಯಪುರ ಬಂದ”À ಗಾಗಿ ಮರ್ಚಂಟ್ಸ ಅಸೋಸಿಯೇಶನ ವತಿಯಿಂದ ಕರೆ ಕೊಡಲಾಗಿತ್ತು. ಬಂದಗೆ ಕರೆಕೊಟ್ಟ ಮೆರೆಗೆ ಎಲ್ಲ ಅಂಗಡಿಗಳ ಜವಳಿ,ಕಿರಾಣಾ, ರೆಡಿಮೆಡ, ಸರಾಫ, ಭಂಡೆ, ಎಲ್‍ಬಿಎಸ್ ಮಾರ್ಕೆಟ, ಸ್ಟೇಶನರಿ, ನೆಹರು ಮಾರ್ಕೆಟ, ಜನತಾ ಮಾರ್ಕೆಟ, ತರಕಾರಿ ವ್ಯಾರಿಗಳು, ಫುಟವೇರ ಬಹುತೇಕವಾಗಿ ಎಲ್ಲ ವ್ಯಾಪಾರ ಬಂದ ಆಗಿ “ವಿಜಯಪುರ ಬಂದ” ಯಶಸ್ವಿಯಾಗಿ ನೆರವೇರಿತು.ವಿವಿಧ ವ್ಯಾಪಾರಿ ಸಂಘಟನೆಗಳು, ಸಾರ್ವಜನಿಕರು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಮೆರೆವಣಿಗೆ ಮೂಲಕ ಗಾಂಧಿ ಚೌಕ ಮರ್ಗವಾಗಿ ಶ್ರೀ ಅಂಬೇಡಕರ ಚೌಕ ಮುಖಾಂತರ ತೆರಳಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಅವೈಜ್ಞಾನಿಕವಾದ ವಿದ್ಯುತ ದರಗಳ ಹೆಚ್ಚಳದ ಪರಿಣಾಮವಾಗಿ ಆರ್ಥಿಕ ಹೊರೆ ಕುರಿತು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮರ್ಚಂಟ್ಸ ಅಸೋಸಿಯೇಶನದ ಅಧ್ಯಕ್ಷರಾದ ಶ್ರೀ ರವೀಂದ್ರ ಎಸ್ ಬಿಜ್ಜರಗಿ ಪದಾಧಿಕಾರಿಗಳಾದ ನಿಲೇಶ ಶಹಾ, ಪ್ರವೀಣ ವಾರದ, ಮನೋಜ ಬಗಲಿ, ಜಯಾನಂದ ತಾಳಿಕೋಟಿ,ರಮೇಶ ನಿಡೋಣಿ, ಸಿದ್ಧಪ್ಪ ಸಜ್ಜನ, ಹಾಗೂ ಜವಳಿವರ್ತಕರ ಸಂಘದ ಅಧ್ಯಕ್ಷರಾದ ಗೋಕುಲ ಮಹೀಂದ್ರಕರ, ಕಾಟನ್ ಅಸೋಸಿಯೇಶನದ ಸೆಕ್ರೆಟರಿ ಅಮುಲ, ಸರಾಫ ವರ್ತಕರ ಸಂಘದ ಉದಯ ಸೋಲಾಪುರಕರ, ರೆಡಿಮೇಡ ವರ್ತಕರ ಸಂಘದ ಅಧ್ಯಕ್ಷ ಪ್ರದೀಪ ಮೊಗಲಿ, ಅಟೋಮೊಬೈಲ ಸಂಘದ ಅಧ್ಯಕ್ಷ ಶ್ರೀಕಾಂತ ಶಿರಾಡೋನ, ಅಮೃತ ತೋಶನಿವಾಲ, ಸ್ಟೇರಪಾರ್ಟ್ಸ ಸಂಘದ ಅಧ್ಯಕ್ಷರಾದ ಗುರುಶಾಂತ ನಿಡೋಣಿ, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ ಬಗಲಿ, ಕೆಆಯ್‍ಎಡಿಬಿ ಅಧ್ಯಕ್ಷರಾದ ಎಸ್‍ವ್ಹಿ ಪಾಟೀಲ, ವಿಜಯಪುರ ವಿಕಾಸ ವೇದಿಕೆ ಅಧ್ಯಕ್ಷ ಪೀಟರ ಅಲೇಕ್ಷಾಡರ, ಟೈರ ಅಸೋಸಿಯೇಶನದ ಅಧ್ಯಕ್ಷರಾದ ಗೋವಿಂದ ತೋಶನಿವಾಲ, ಗುಂಡು ಹನಮಶೆಟ್ಟಿ, ಆಯಿಲ ಮಿಲದ ಕುಮಾರ ಹಕ್ಕಾಪಕ್ಕಿ, ಯುವ ಶರಣ ಸಾಹಿತ್ಯದ ಅಧ್ಯಕ್ಷ ಶರಣು ಶಬರದ, ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಹನಮಂತ ಬಿರಾದಾರ, ಮಾಜಿ ನಗರ ಸಭೆ ಸದಸ್ಯರಾದ ರವಿ ಕುಲಕರ್ಣಿ, ಫರ್ಟಿಲೈಜರ್ಸ ಅಸೋಸಿಯೇಶನದ ಅಧ್ಯಕ್ಷರಾದ ಬಸವರಾಜ ಕೋರಿ, ಟ್ರಾನ್ಸಪೊರ್ಟ ಅಸೋಸಿಯೇಶನದ ಗಿರೀಶ ಅನಂತಪುರ, ಆಫಸಟ್ ಪ್ರಿಂಟರ್ಸ ಅಧ್ಯಕ್ಷ ಆನಂದ ಬಗಾಡಿ, ಪ್ರಿಂಟಿಂಗ ಪ್ರೆಸ್/ ವರ್ಕರ್ಸ ಅಸೋಸಿಯೇಶನದ ಚಿದಾನಂದ ವಾಲಿ, ಬಾಗವಾನ ಅಸೋಸಿಯೇಶನದ ಫಾರೂಖ, ಮತ್ತು ರಿಟೈಲ ತರಕಾರಿ ಅಸೋಸಿಯೇಶನದ ಅಧ್ಯಕ್ಷರಾದ ಮನಗೂಳಿ, ಎಪಿಎಂಸಿ ಗಣ್ಯ ವ್ಯಾಪಾರಸ್ಥರಾದ ಶಾಂತಪ್ಪಾ ದೇಸಾಯಿ, ಗಂಗಾಧರ ಜೋಗೂರ, ಚಂದ್ರಶೇಖರ ಬಳಗಾನೂರ ಮುಂತಾದವರಿದ್ದರು.