ವಿದ್ಯುತ ಕ್ಷೇತ್ರ ಖಾಸಗೀಕರಣದಿಂದ ಜನಸಾಮಾನ್ಯರಿಗೆ ತೊಂದರೆ

ಕಲಬುರಗಿ:ಎ.3: ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ ಎಲ್ಲರಿಗೂ ದೊರೆಯಬೇಕು. ವಿದ್ಯುತ ಕ್ಷೇತ್ರ ಖಾಸಗೀಕರಣವಾದರೆ ಬಡವರು, ರೈತರಿಗೆ ವಿದ್ಯುತ ಬಳಕೆಯಲ್ಲಿ ದೊರೆಯುತ್ತಿರುವ ಸಬ್ಸಿಡಿ ದೊರೆಯದೆ ತೊಂದರೆಯಾಗುತ್ತದೆ. ಆದ್ದರಿಂದ ಖಾಸಗೀಕರಣ ಮಾಡಬಾರದೆಂದು ಜೆಸ್ಕಂ ನೌಕಕರ ಸಂಘದ ನೂತನ ಉಪಾಧ್ಯಕ್ಷ ಬಾಬು ಕೋರೆ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ, ವಿಜಯನಗರ ಕಾಲನಿ ಕ್ರಾಸ್‍ನಲ್ಲಿರುವ ಇಂಡೊ ಕಿಡ್ಜ್ ಪ್ಲೇ-ಹೋಮ್ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ’ ಹಾಗೂ ‘ಸಾಸಿರೆ ನಾಡು ಗೆಳೆಯರ ಬಳಗ’ ಇವುಗಳು ಸಂಯಕ್ತವಾಗಿ ಗುರುವಾರ ಸಂಜೆ ತಮಗೆ ಹಮ್ಮಿಕೊಂಡಿದ್ದ ಹೃದಯಸ್ಪರ್ಶಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ವಿದ್ಯುತ ಇಲಾಖೆ ನೌಕರರು ತುಂಬಾ ಅಪಾಯವಾದ ಸ್ಥಿತಿಯಲ್ಲಿಯೂ ಮತ್ತು ಹಗಲು-ರಾತ್ರಿಯೆನ್ನದೆ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರಿಗೆ ವೇತನ ಸೇರಿದಂತೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಕಾಲ-ಕಾಲಕ್ಕೆ ದೊರೆಯಬೇಕು. ನೌಕರರ ಹಿತರಕ್ಷಣಗೆ ತಮ್ಮ ಸಂಘ ಸನ್ನದ್ದವಾಗಿದೆ. ಇಲಾಖೆ ಮತ್ತು ನೌಕರರಿಗೆ ಸಂಬಂಧಿಸಿದಂತೆ ದಿ.ಧರ್ಮಸಿಂಗ ಅವರು ಮುಖ್ಯಮಂತ್ರಿಯಾಗಿದ್ದಾಗ ಉತ್ತಮವಾದ ಸ್ಪಂದನೆ ನೀಡಿ, ಕಾರ್ಯ ಮಾಡಿದ್ದರಿಂದ ನಮ್ಮ ಭಾಗದ ನೂರಾರು ನೌಕರರಿಗೆ ಅನಕೂಲವಾಗಿದ್ದು ಮರೆಯುವಂತಿಲ್ಲವೆಂದು ಅವರ ಕಾರ್ಯವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕೆ.ಬಸವರಾಜ, ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಕೋರೆಯವರು ಸಮಾಜ ಸೇವಕರಾಗಿದ್ದು, ಕಳೆದ ಒಂದು ದಶಕದಿಂದ ನಮ್ಮ ಭಾಗದ ಸಮಸ್ಯೆಗಳು, ಅದರಲ್ಲಿ ವಿಶೇಷವಾಗಿ ವಿದ್ಯುತ ಇಲಾಖೆಗೆ ಸಂಬಂಧಿಸಿದಂತೆ ಹೋರಾಟ ಮಾಡುವ ಮೂಲಕ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ. ಅವರೀಗ ನೌಕರರ ಸಮಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಇಲಾಖೆ ಮತ್ತು ನೌಕರರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಅವರಲ್ಲಿರುವ ಸಮಾಜದ ಬಡವರು, ರೈತಪರ ಕಾಳಜಿ ಮಾದರಿಯಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಮುಕುಂದಪ್ಪ ನಂದಗಾಂವ, ಬಿ.ಎಚ್.ನಿರಗುಡಿ, ಮಹೇಶ ಹೂಗಾರ, ಸಿದ್ದರಾಮ ಬೇತಾಳೆ, ಶಿವಶರಣ ಉದನೂರ, ಶಿವರಾಜ ಎಂ.ನಂದಗಾಂವ, ಚಂದ್ರಕಾಂತ ಬಿರಾದಾರ, ಚಂದ್ರಶೇಖರ ಪಾಟೀಲ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಶ್ರೀಶೈಲ್ ಮಾಳಗೆ, ಸಂಜೀವಕುಮಾರ ಪಾಟೀಲ,ಸಂಜಯ ಮಠ, ಶಿವಲಿಂಗಪ್ಪ ಬಿರಾದಾರ,ಶಿವಲಿಂಗಪ್ಪ ಕೋಡ್ಲಿ, ಪ್ರಶಾಂತ ಕೊತಂಬರಿ, ಸಿದ್ದರಾಮ ಯಾದವಾಡ, ವಿಲಾಸರಾವ ಸಿನ್ನೂಕರ್, ಸಂಜಯ ಖಜೂರಿ,ಬಸಯ್ಯಸ್ವಾಮಿ ಹೊದಲೂರ, ಅಣ್ಣಾರಾಯ ಮಂಗಾಣೆ, ದಿಲೀಪ ಚವ್ಹಾಣ, ಪ್ರಭುಲಿಂಗ ಮೂಲಗೆ, ನಾಗೇಂದ್ರಪ್ಪ ಕಲಶೆಟ್ಟಿ, ಶರಣು ಬಿರಾದಾರ, ರವಿಕುಮಾರ ಹೂಗಾರ, ಶ್ರೀಪಾಲ ಭೋಗಾರ, ಸೇರಿದಂತೆ ಇನ್ನಿತರರಿದ್ದರು.