(ಸಂಜೆವಾಣಿ ವಾರ್ತೆ)
ವಿಜಯಪುರ :ಜು.11: ಮನಗೂಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ 33 ಕೆವಿ ವಿದ್ಯುತ ವಿತರಣಾ ಕೇಂದ್ರ ಮನಗೂಳಿ ಪಟ್ಟಣದ ಸುತ್ತಮುತ್ತಲಿನ ಗ್ರಾಮ ರೈತರು ಕಬ್ಬು, ದಾಳಿಂಬೆ, ದ್ರಾಕ್ಷಿ, ರೇಷ್ಮೆ, ನಿಂಬೆ, ಪೇರು ಮುಂತಾದ ಬೆಳೆಗಳನ್ನು ಮಾಡಿಕೊಂಡಿರುವ ರೈತರ ಜಮೀನುಗಳಿಗೆ ಪಂಪಸೆಟ್ ಮೂಲಕ ನೀರು ಪಡೆಯಲು ವಿದ್ಯುತ್‍ನ್ನು ಮೂರು ತಿಂಗಳಿನಿಂದ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆಯ ನಮ್ಮ ಬಣದ ಜಿಲ್ಲಾಧಿಕಾರಿಗಳು ಹಾಗು ಮನಗೂಳಿ ಹಾಗೂ ಹತ್ತರಕಿಹಾಳ, ಯರನಾಳ ಗ್ರಾಮದ ರೈತರು ಶಾಖಾಧಿಕಾರಿ ಪಿ.ಎಂ. ಉಕ್ಕಲಿ ವಿರುದ್ದ ಪ್ರತಿಭಟಿಸಿ ವಿದ್ಯುತ್ ನೀಡುವಂತೆ ಹೆಸ್ಕಾಂ ಹುಬ್ಬಳಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದರೂ ಮಳೆಯಾಗುತ್ತಿಲ್ಲ. ಮುಂಗಾರು ಮಳೆಯನ್ನು ನಂಬಿ ರೈತರು ಇತ್ಯಾದಿ ದವಸಧಾನ್ಯಗಳನ್ನು ಬಿತ್ತನೆ ಮಾಡಿರುತ್ತಾರೆ. ಆದರೆ ಮಳೆಯಾಗುತ್ತಿಲ್ಲ ಈ ಚಿಂತೆಯಲ್ಲಿರುವ ರೈತರಿಗೆ ಸದಾ 3 ತಿಂಗಳಿನಿಂದ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಕಡಿತ ಮಾಡಿ ರೈತರ ಬೆಳೆಗಳು ಒಣಗುತ್ತಿವೆ. ಇಂತಹ ಸಂಕಷ್ಟದ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದರೂ ಕೂಡ ನ್ಯಾಯ ಸಿಗುತ್ತಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ಬಸವನಬಾಗೇವಾಡಿ ಕಚೇರಿಗೆ ಬೀಗ್ ಮುದ್ರೆ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ಘಂಟೆ ಬಾರಿಸಿದರು.
ಮಲ್ಲಿಕಾರ್ಜುನ ಉಣ್ಣಿಭಾವಿ, ಬಸವರಾಜ ಮುತ್ತಪ್ಪನವರ, ಸಿದ್ದಪ್ಪ ಯರನಾಳ, ಮಾಳಪ್ಪ ಆಸಂಗಿ, ಭೀಮಣ್ಣ ರೊಳ್ಳಿ, ಶ್ರೀಮಂತ ಲಗಟಗೇರಿ, ಶಿವಾನಂದ ನಾಗರಾಳ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕಾರಜೋಳ, ಮಿರಗಪ್ಪ ಕಾರಜೋಳ, ಸುರೇಶ ಯರನಾಳ, ಅಪ್ಪಾಜಿ ಭೋಸಲೆ, ಚನ್ನಪ್ಪ ಜಾಡರ, ಪ್ರಶಾಂತ ಗಾಣಿಗೇರ, ಪ್ರಭು ನುಚ್ಚಿ, ಶಿವಪ್ಪ ಹುಣಸಿಕಟ್ಟಿ, ಸಂಗಪ್ಪ ಕಲ್ಯಾಣಿ, ಮಲ್ಲು ಉಣ್ಣಿಬಾವಿ, ಲಕ್ಕಪ್ಪ ಕಾರಜೋಳ, ಯಲ್ಲಪ್ಪ ಬಾಗೇವಾಡಿ. ಲಕ್ಷ್ಮಣ ಬಾಗೇವಾಡಿ, ಮಲ್ಲು ಮನಗೂಳಿ, ಚಂದ್ರಕಾಂತ ಬಳೂರ, ಪ್ರಶಾಂತ ಗುಡೇಕರ, ಪಿಂಟು ಮೋರೆ, ಅರುಣ ಕಲ್ಯಾಣ, ಶಿವಪ್ಪ ಲಗಟಗೇರ, ಮಂಜು ನಾಮನೆ, ಅರುಣ ಮೋರೆ, ಅನಿಲ ಆಸಂಗಿ, ಮುದಕಪ್ಪ ನಾಗರಾಳ, ಶ್ರೀಮಂತ ಲಗಟಗೇರಿ, ಮಹಾಂತೇಶ ಮಂಗೊಂಡ, ಗಣಪತಿ ರಾಠೋಡ, ಮಿಟ್ಟು ರಾಠೋಡ, ಮುತ್ತಪ್ಪ ಕೋಲಾರ, ಶೇಖರ ಅಸ್ಕಿ, ಮಂಜುನಾಥ ಮಬ್ರಕರ, ಸುರೇಶ ಜಾಡರ, ಶಂಕ್ರಪ್ಪ ಕಾಳಗಿ, ಗೊಲ್ಲಾಳಗೌಡ ಗುಜಗೊಂಡ, ಶಿವು ಕಂಬಿ, ಮಹಾದೇವಪ್ಪ ಕಾಳಗಿ, ರಾಮನಗೌಡ ಪಾಟೀಲ ಮುದಕಪ್ಪ ರೊಳ್ಳಿ ಪರಶುರಾಮ ನಾಗರಾಳ ಮುಂತಾದ ಮೂರು ಗ್ರಾಮದ ಪ್ರಗತಿಪರ ರೈತರು ಭಾಗವಹಿಸಿದ್ದರು.