ವಿದ್ಯುತ್ ಹರಿದು ೧.೫ ಲಕ್ಷದ ಎಮ್ಮೆ ಸಾವು

ಸಿರವಾರ,ಮೇ.೧೪- ಜಮೀನಿನಲ್ಲಿ ಮೇಯಲು ಹೋದ ಎಮ್ಮೆಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಸಿರವಾರ ಪಟ್ಟಣದ ಹೊರವಲಯದಲ್ಲಿ ಜರುಗಿದೆ. ಪಟ್ಟಣದ ನಿವಾಸಿಯಾದ ಯಲ್ಲಪ್ಪ ಗಡ್ಲ ತಂ ಬಸ್ಸಣ್ಣ ಗಡ್ಲ ಸೇರಿದ ಸರ್ವೆ ನಂಬರ್ ೪೪ ರಲ್ಲಿ ೧೦ ದಿನಗಳ ಹಿಂದೆ ಕಂಬ, ಟಿಸಿ ಬಿದ್ದಿದೆ, ಯಲ್ಲಪ್ಪ ಅವರು ಜೇಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಅವರು ಲೈನ್ ವಿಕ್ಷಣೆ ಮಾಡದೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸಿದ್ದೆವೆಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.
ಆದರೆ ಭಾನುವಾರ ಮದ್ಯಾಹ್ನ ಎಂದಿನಂತೆ ಎಮ್ಮೆಗೆ ವಿದ್ಯುತ್ ಹರಿದ ಪರಿಣಾಮ ಸಾವನ್ನಪ್ಪಿದೆ. ೧.೫ ಲಕ್ಷ ವೆಚ್ಚದ ಎಮ್ಮೆಯು ಸಾವನ್ನಪ್ಪಿದರಿಂದ ೧.೫ ಲಕ್ಷ ಸಾಲದ ಹೊರೆಯಾಗಿದೆ. ಕೂಡಲೇ ಅದಿಕಾರಿಗಳು ವಿಕ್ಷಣೆ ಮಾಡಿ ಸೂಕ್ತ ಪರಿಹಾರ ನೀಡಬೇಕೆಂದು ಮಾಲಿಕನ ಒತ್ತಾಯವಾಗಿದೆ.