ವಿದ್ಯುತ್ ಸ್ಪರ್ಶ ೩ ಆನೆಗಳ ಸಾವು

ಚೆನ್ನೈ, ಮಾ.೭-ರೈತನೊಬ್ಬ ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ಹಾಕಿದ್ದು, ಇದನ್ನು ದಾಟುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಮೂರು ಆನೆಗಳು ಸತ್ತಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಧರ್ಮಪುರಿ ಜಿಲ್ಲೆಯ ಕಾಳಿ ಕೌಂಡರ್ ಕೊಟ್ಟೈ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ಮೂರು ಆನೆಗಳು ಮೃತಪಟ್ಟಿವೆ.

ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದ ಕಾರಣ ರೈತ ತನ್ನ ಜಮೀನಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದ. ಇದು ಸ್ಪರ್ಶವಾದ ಕಾರಣ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.