ವಿದ್ಯುತ್ ಸ್ಪರ್ಶ: ಜೂನಿಯರ್ ಪವರ್ ಮ್ಯಾನ್ ಸಾವು

ಬೆಟ್ಟದಪುರ:ಏ:23: ಪಿರಿಯಾಪಟ್ಟಣ ತಾಲೂಕಿನ ಸುಬ್ಬಯ್ಯನಕೊಪ್ಪಲು ಗ್ರಾಮದ ಬಳಿ ಜೂನಿಯರ್ ಪವರ್‍ಮ್ಯಾನ್ ಅಮೀರ್‍ಖಾನ್(27) ವಿದ್ಯುತ್ ಪರಿವರ್ತಕ ದುರಸ್ತಿ ಮಾಡುತ್ತಿರುವಾಗ ವಿದ್ಯುತ್ ಸ್ಪರ್ಶಿಸಿ ಟ್ರಾನ್ಸ್ಫಾರ್ಮರ್‍ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಮೃತ ಮೂಲತಃ ದಾವಣಗೆರೆ ಜಲ್ಲೆಯವನಾಗಿದ್ದು, ಪಿರಿಯಾಪಟ್ಟಣ ತಾಲೂಕಿನ ಕಣಗಾಲು ವಿದ್ಯುತ್ ಉಪಕೇಂದ್ರದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತ ಅಮೀರ್‍ಖಾನ್‍ಗೆ ಕಣಗಾಲು ಗ್ರಾಮದ ಯುವತಿಯೊಂದಿಗೆ ಮುಂದಿನ ತಿಂಗಳು ಮದುವೆ ನಿಶ್ಚಯವಾಗಿದ್ದು, ಅವರ ಸಂಬಂಧಿಕರು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ದೂರುತ್ತಿದ್ದಾರೆ.
ಈ ಬಗ್ಗೆ ದೂರು ನೀಡಲು ದಾವಣಗೆರೆಯಿಂದ ಅವರ ಪೆÇೀಷಕರು ಬರಬೇಕು ನಂತರ ಕ್ರಮ ಕೈಗೊಳ್ಳುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಮೃತನ ಶವವನ್ನು ಪಿರಿಯಾಪಟ್ಟಣದ ಸಾರ್ವಜನಿಕ ಶವಗಾರಕ್ಕೆ ಸಾಗಿಸಲಾಗಿದೆ. ಈ ಕುರಿತು ಬೆಟ್ಟದಪುರ ಪೆÇಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.