ವಿದ್ಯುತ್ ಸ್ಪರ್ಶ ಕ್ಯಾಂಟರ್ ಚಾಲಕ ಸಾವು


ಗೌರಿಬಿದನೂರು.ನ೧೩: ಅಂಗನವಾಡಿ ಕೇಂದ್ರಕ್ಕೆ ಪಡಿತರ ವಿತರಿಸಲು ಬಂದ ಕ್ಯಾಂಟರ್‌ಗೆ ವಿದ್ಯುತ್ ಸ್ಪರ್ಶಿಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಮಲೋಡು ಸರ್ಕಾರಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದಿದೆ.
ಮೃತ ಚಾಲಕನನ್ನು ಶಿಡ್ಲಘಟ್ಟ ಮೂಲದ ಶರತ್ ಬಾಬು (೨೮) ಎಂದು ಗುರುತಿಸಿದ್ದು, ಈತನು ಶುಕ್ರವಾರ ಉಡುಮಲೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪಡಿತರ ವಿತರಣೆಯ ಸಲುವಾಗಿ ಶಾಲೆಯ ಕಾಂಪೌಂಡ್ ಗೆ ಆಗಮಿಸಿದ್ದ ಕ್ಯಾಂಟರ್ ವಾಹನವು ಹಿಂದಕ್ಕೆ ಚಲಾಯಿಸಿಕೊಂಡು ಬರುವ ವೇಳೆ ಕ್ಯಾಂಟರ್ ವಾಹನವು ವಿದ್ಯುತ್ ತಂತಿಗೆ ತಗುಲಿದೆ.
ಚಾಲಕ ಶರತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಾಹನದ ಕ್ಲೀನರ್ ಆನಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ವೇಳೆ ಮಕ್ಕಳು ಯಾರೂ ಶಾಲೆಯಲ್ಲಿ ಇಲ್ಲದಿರುವುದು ದೊಡ್ಡ ಅಪಘಾತವನ್ನು ತಪ್ಪಿಸಿದಂತಾಗಿದೆ. ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ