
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.09: ನಗರದ ಹೊರವಲಯದಲ್ಲಿರುವ ಬಿಸಲಹಳ್ಳಿ ಬಳಿ. ವರಬಸಪ್ಪ ಗುಡಿ ಮುಂದೆ ಹಾದು ಹೊಗುವ ಕರೆಂಟ್ ಫೀಡರ್ ಕೆಲಸವನ್ನು ಮಾಡುತ್ತಿದ್ದ ಕಾರ್ಮಿಕನಿಗೆ ಹಠಾತ್ತಾಗಿ ವಿದ್ಯುತ್ ಸ್ಪರ್ಶವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ದಾದಾ ಪೀರ್ ಎನ್ನುವ ಗುತ್ತಿಗೆದಾರನ ಅಡಿಯಲ್ಲಿ ಅಸುಂಡಿ ಗ್ರಾಮದ ರಾಮು(39)ಎನ್ನುವ ವ್ಯಕ್ತಿ ವಿದ್ಯುತ್ ಕಂಬದ ಮೇಲೆ ಏರಿ ಕಾಮಗಾರಿ ಮಾಡುವ ಸಮಯದಲ್ಲಿ ಹಠಾತ್ತ್ಅಗಿ ವಿದ್ಯುತ್ ಸಪ್ಲೈ ಮಾಡಿದ ಕಾರಣ ಆತ ಬಿದ್ದು ಗಾಯಗೊಂಡಿದ್ದಾನೆ.
ತಕ್ಷಣವೇ ವಿಮ್ಸ್ ಗೆ ಆಸ್ಪತ್ರೆ ದಾಖಲೆ ಮಾಡಿದ್ದಾರೆ,ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗೆ ಖಾಸಗಿ ಆಸ್ಪತ್ರೆ ದಾಖಲೆ ಮಾಡಲಾಗಿದೆ.
ವಿದ್ಯುತ್ ಪ್ರವಹಿಸಲು ಕಾರಣ ಏನು, ಆಗಿರುವ ಸಮಸ್ಯೆ ಬಗ್ಗೆ ಗುತ್ತಿಗೆದಾರ ಕಾರ್ಮಿಕನಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷವಹಿಸುದ್ದಾರೆಂಬ ದೂರು ಕೇಳಿ ಬಂದಿದೆ.
ಈ ವಿಷಯದಲ್ಲಿ ಜೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗದೆ ಕಾರ್ಮಿಕನಿಗೆ ನ್ಯಾಯ ಒದಗಿಸಲು ಆಗ್ರಹಿಸಿದೆ.