ವಿದ್ಯುತ್ ಸ್ಪರ್ಶದಿಂದ ಆಕಳು ಸಾವು

ಹುಬ್ಬಳ್ಳಿ,ಜು19 : ವಿದ್ಯುತ್ ಸ್ಪರ್ಶದಿಂದ ಆಕಳು ಸಾವನ್ನಪ್ಪಿದ ಘಟನೆ ನಗರದ ಅದರಗುಂಚಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.
ಈ ಆಕಳು ಗುರುಸಿದ್ದಪ್ಪ ರೇವಣ್ಣವರ ಎಂಬಾತರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ಗುರುಸಿದ್ದಪ್ಪ ಹೊಲದಿಂದ ಮನೆಗೆ ಹೋಗುವ ಸಂದರ್ಭದಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸ್ಪರ್ಶಸಿದ್ದು, ಈ ಘಟನೆಯಲ್ಲಿ ಆಕಳು ಮೃತಪಟ್ಟರೆ ಗುರುಸಿದ್ದಪ್ಪ ಪ್ರಾಣಾಯಾಮದಿಂದ ಪಾರಾಗಿದ್ದಾರೆ.
ಈ ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.