ವಿದ್ಯುತ್ ಸ್ಪರ್ಶದಿಂದ ಅಂಗಡಿಗಳ ಭಸÀ್ಮ, 32 ಲಕ್ಷ ರೂ. ಹಾನಿ

ಬೀದರ, ನ. 30 ಃ ನಗರದ ಶಿವನಗರದ ಕ್ಲಾಸಿಕ್ ಧಾಬಾ ಸಮೀಪದ ಎದುರಿನ ರಾಧೇಶ್ಯಾಮ ಗಾದಿ ಅಂಗಡಿ, ಮಾ. ಅಲ್ಯೂಮಿನಿಯಮ್ ಮತ್ತು ಹೀರಾ ಹಾರ್ಡವೇರ್ ಅಂಗಡಿಯಲ್ಲಿ ದಿನಾಂಕ 28-11-2021 ರಂದು ರಾತ್ರಿ 11 ಗಂಟೆ ಸುಮಾರಿಗೆ ವಿದ್ಯುತ್ ಸ್ಪರ್ಶದಿಂದ ತಗುಲಿದ ಆಕಷ್ಮಿಕ ಬೆಂಕಿ ಅವಘಡದಿಂದ ಗಾದಿ ಅಂಗಡಿಯ ಸುಮಾರು 4 ಲಕ್ಷ ರೂ.ಗಳು ಹಾಗೂ ಮಾ. ಅಲ್ಯೂಮಿನಿಯಮ್ ಮತ್ತು ಹೀರಾ ಹಾರ್ಡವೇರ್ ಅಂಗಡಿಯ ಸುಮಾರು 28 ಲಕ್ಷ ರೂ.ಗಳ ವಸ್ತುಗಳು ಸುಟ್ಟು ಭಷ್ಮವಾಗಿದೆ. ಈ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಅಗಮಿಸಿದ ಆಗ್ನಿಶಾಮಕ ದಳದ ಪೋಲಿಸರು ಬಂಕಿ ನಂದಿಸುವ ವೇಳೆಗೆ ಲಕ್ಷಾಂತರ ರೂ. ಹಾನಿಯಾಗಿದೆ. ಇದರಿಂದ ಎರಡು ಅಂಗಡಿ ಮಾಲೀಕರು ದಿಕ್ಕು ತೋಚದೇ ಪರೇಶಾನಾಗಿದ್ದಾರೆ.
ನಗರದ ಶಿವನಗರದ ಕ್ಲಾಸಿಕ್ ಧಾಬಾ ಸಮೀಪದ ಎದುರಿನ ರಾಧೇಶ್ಯಾಮ ಗಾದಿ ಅಂಗಡಿಯಲ್ಲಿ ಮೊಟ್ಟ ಮೊದಲ ಬಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪತ್ರಾಗಳ ಶೇಡ್‍ನಲ್ಲಿರುವ 2 ಫಿಟ್ಲರ್ ಯಂತ್ರಗಳು, 1 ಹೋಲಿಗೆ ಯಂತ್ರ, ಲಕ್ಷಾಂತರ ರೂ.ಗಳ ಹತ್ತಿ, ಬೇಡ್‍ಗಳು ಬಳಸುವ ಬಟ್ಟೆಗಳು ಸೇರಿ ಸುಮಾರು 4 ಲಕ್ಷ ರೂ.ಗಳ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ರಾಧೇಶ್ಯಾಮ ಅವರು ನ್ಯೂ ಟೌನ್ ಪೊಲೀಸ್‍ರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಮಾ. ಅಲ್ಯೂಮಿನಿಯಮ್ ಮತ್ತು ಹೀರಾ ಹಾರ್ಡವೇರ್ ಅಂಗಡಿಯಲ್ಲಿ ಅಲ್ಯೂಮಿನಿಯಮ್ ಹಾಗೂ ಹಾರ್ಡವೇರ್ ವಸ್ತುಗಳು ಸುಟ್ಟಿದ್ದರಿಂದ ನಮ್ಮ ಬದುಕು ಸಂಪೂರ್ಣವಾಗಿ ಕಂಗಾಲಾಗಿದೆ. ಇದರಲ್ಲಿ ಸುಮಾರು 28 ಲಕ್ಷ ರೂ.ಗಳ ಅಲ್ಯೂಮಿನಿಯಮ್ ಹಾರ್ಡವೇರ್ ವಸ್ತುಗಳು ಸುಟ್ಟು ಹೋಗಿವೆ ಎಂದು ಜಯೇಶ ಪಟೇಲರು ನ್ಯೂ ಟೌನ್ ಪೊಲೀಸ್‍ರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ನಾವೂ ಕಡು ಬಡವರಾಗಿದ್ದು, ಹೊಟ್ಟೆಪಾಡಿಗಾಗಿ ಕಳೆದ 15-20 ವರ್ಷಗಳಿಂದ ಅಲ್ಯೂಮಿನಿಯಮ್, ಹಾರ್ಡವೇರ್ ಹಾಗೂ ಗಾದಿ ಅಂಗಡಿ ನಡೆಸುತ್ತಿದ್ದೇವೆ. ಇದೊಂದು ನಮ್ಮ ಜೀವನ ಹಾಗೂ ಕುಟುಂಬದ ಆಸರೆಯಾಗಿತ್ತು. ಕಳೆದ 2 ವರ್ಷಗಳ ಕೋವಿಡ್-19 ಕರೋನಾ ವೈರಸ್ ಲಾಕ್‍ಡೌನ್ ನಿಂದ ವ್ಯಾಪಾರ ವಹಿವಾಟು ಇಲ್ಲದೇ ತೀವ್ರ ಸಂಕಷ್ಟದಲ್ಲಿದ್ದ ನಮ್ಮ ಬದುಕು ಹಳಿಗೆ ಬರುವ ಮುನ್ನವೇ ಮತ್ತೇ ಅಗ್ನಿ ಅವಘಡ ಸಂಭವಿಸಿ ಬದುಕು ದುಸ್ತರವಾಗಿದೆ. ಬೀದರ ಜಿಲ್ಲಾಡಳಿತ ಪರಿಹಾರ ನೀಡುವ ಮೂಲಕ ತೀವ್ರ ಸಂಕಷ್ಟದಲ್ಲಿ ಬಳಲುತ್ತಿರುವ ಕುಟುಂಬಕ್ಕೆ ಆಸರೆಯಾಗಬೇಕು ಎಂದು ರಾಧೇಶ್ಯಾಮ ಗಾದಿ ಅಂಗಡಿ ಮಾಲೀಕ ರಾಧೇಶ್ಯಾಮ ಬುಧೇರ ಮತ್ತು ಮಾ. ಅಲ್ಯೂಮಿನಿಯಮ್ ಮತ್ತು ಹೀರಾ ಹಾರ್ಡವೇರ್ ಅಂಗಡಿಯ ಮಾಲೀಕ ಜಯೇಶ ಪಟೇಲರು ಜಂಟಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಈ ಕುರಿತು ನ್ಯೂ ಟೌನ್ ಪೋಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.