ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ನ.25:ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಜಯನಗರ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇದೇ ನವೆಂಬರ್ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಜಯನಗರ ಫೀಡರ್: ಜಯನಗರ, ಡಾಕ್ಟರ್ಸ್ ಕಾಲೋನಿ, ಬನಶಂಕರಿ ಲೇಔಟ್, ಡೆಂಟಲ್ ಕಾಲೇಜು, ಆಂಜನೇಯ ನಗರ, ರಂಗದಾಳ್ ಕಾಂಪ್ಲೇಕ್ಸ್, ಆರ್.ಟಿ.ಓ, ವಿಠ್ಠಲ್ ದೊಡ್ಡಮನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.