ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ನ.23:ಗುಲಬರ್ಗಾ ಪಶ್ಚಿಮ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬರುವ ಚೌಡಾಪೂರ್ 33 ಕೆವ್ಹಿ ಲೈನ್‍ಮೇಲೆ ಬರುವ ಹಡಗಿಲ್ ಹಾರುತಿ ಹಾಗೂ ಗೊಬ್ಬೂರ ಗ್ರಾಮಗಳಲ್ಲಿ ದುರಸ್ತಿ ಕಾರ್ಯ ಕೈಗೊಂಡಿರುವ ಪ್ರಯುಕ್ತ ಇದೇ ನವೆಂಬರ್ 24 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಕೆಳಕಂಡ ಫೀಡರ್‍ಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಗ್ರಾಹಕರು ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಗುಲಬರ್ಗಾ ಪಶ್ಚಿಮ ವಿದ್ಯುತ್ ವಿತರಣಾ ಕೇಂದ್ರ: ಜಫಾರಾಬಾದ ಐ.ಪಿ. ಫೀಡರ್: ಜಾಫರಾಬಾದ ಗ್ರಾಮ, ಸಾವಳಗಿ(ಬಿ). ಸಾವಳಗಿ ಸ್ಟೇಶನ್, ಯಳವಂತಗಿ, ಹತಗುಂದಾ. ಪಟ್ಟಣ ಎನ್.ಜೆ.ವಾಯ್, ಪಟ್ಟಣ ಗ್ರಾಮ, ಭೀಮಳ್ಳಿ, ಕೇರಿಭೋಸಗಾ, ಸಿಂದಗಿ ಗ್ರಾಮ, ಎಫ್-1 ಹಡಗಿಲ್ ಹಾರುತಿ, ಎಫ್-2 ಮೇಲಕುಂದಾ (ಎನ್.ಜೆ.ವೈ.), ಎಫ್-3 ಮಿಣಜಗಿ ಎನ್.ಜೆ.ವೈ., ಎಫ್-4 ಕಡಣಿ ಐಪಿ., ಎಫ್-5 ಶರಣ ಶಿರಸಗಿ ಎನ್.ಜೆ.ವೈ ಹಾಗೂ ಎಫ್-6 ಬಬಲಾದ ಹಾಗೂ ಎಫ್-1 ಗೊಬ್ಬೂರ್ ಐ.ಪಿ., ಎಫ್-2 ಗೊಬ್ಬೂರ್ ಎನ್.ಜೆ.ವೈ, ಎಫ್-3 ಬಿದನೂರ ಐ.ಪಿ. ಹಾಗೂ ಹಾವನೂರ ಐ.ಪಿ.