ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ನ.20:ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಆಳಂದ ಕಾಲೋನಿ ಫೀಡರ್ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ರಸ್ತೆ ಅಗಲೀಕರಣ ಕಾರ್ಯಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇದೇ ನವೆಂಬರ್ 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಆಳಂದ ಕಾಲೋನಿ ಫೀಡರ್: ಜಫರಾಬಾದ್, ಚೋರ್ ಗುಮ್ಮಜ್, ಲಕ್ಷ್ಮೀನಗರ, ಫಿಲ್ಟರ್ ಬೆಡ್, ಅಹ್ಮದ್ ನಗರ, ಪಿಎಫ್ ಆಫೀಸ್, ಚಿಂಚೋಳಿ ಲೇಔಟ್, ಅಯೋಧ್ಯಾ ನಗರ, ರಾಣೇಶಪೀರ್ ದರ್ಗಾ, ಪಲ್ಲಾಪುರ ಆಶ್ರಯ ಕಾಲೋನಿ, ಅಂಬೇಡ್ಕರ್ ಆಶ್ರಯ ಕಾಲೋನಿ, ಶಿವ ದಾಲ್‍ಮಿಲ್, ಪಾರ್ಲೆ ಗೋದಾಮು , ವಿಶ್ವಾರಾಧ್ಯ ಪೆಟ್ರೋಲ್ ಪಂಪ್, ದುಬೈ, ನಾಬಿಲೋನ್, ದುಬೈ , ಶಿವನಗರ, ಖಾದ್ರಿ ಚೌಕ್, ಆಶ್ರಯ ಕಾಲೋನಿ, ಸಲಗರ್ ನಗರ, ಸುವರ್ಣ ನಗರ, ಕೃಷಿ ವಿಶ್ವವಿದ್ಯಾಲಯ ಹಾಗೂ ಮಹಾದೇವ ನಗರ.