ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ಸೆ.08:ಕಲಬುರಗಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಲಬುರಗಿ (ಉತ್ತರ) ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ 110ಕೆವಿ ಸಕ್ಯೂರ್ಟ್-2 ಲೈನ್ ಶ್ಟ್ರಿಂಗಿಂಗ್ ಲೋಕೇಶನ್ ನಂಬರ 20 ರಿಂದ 13 ಮೇಲೆ ಬರುವ 11ಕೆ.ವಿ. ನಂದೂರ ಐಪಿ ಸೆಟ್ ಫೀಡರ್ ಹಾಗೂ ಕೆಸರಟಗಿ ಫೀಡರ್‍ಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಲೈನ್‍ಕ್ಲಿಯರ್ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಹಾಗೂ 11ಕೆ.ವಿ. ಪ್ರಶಾಂತ ನಗರ(ರಾಜಾಪುರ) ಫೀಡರ್ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕೆಳಕಂಡ ಫೀಡರ್ ಮೇಲೆ ಬರುವ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ(ಉತ್ತರ) ವಿದ್ಯುತ್ ವಿತರಣಾ ಕೇಂದ್ರ: 11ಕೆವಿ ನಂದೂರ ಐಪಿಸೆಟ್ ಫೀಡರ್ ಗ್ರಾಮಗಳು: ನಂದೂರ(ಬಿ), ನಂದೂರ(ಕೆ), ಧರ್ಮಾಪೂರ, ಬಾಪುನಾಯಕ ತಾಂಡಾ, ಕುಸನೂರ ತಾಂಡಾ, ಝಾಪೂರ ತಾಂಡಾ ಹಾಗೂ ನಂದೂರ ರೈಲ್ವೆ ಸ್ಟೇಶನ್ ತಾಂಡಾ.
ಕೆಸರಟಗಿ ಫೀಡರ್ ಗ್ರಾಮಗಳು: ಬುದ್ದಮಂದಿರ, ಸರಸ್ವತಿಪುರಂ, ಕೃಷ್ಣಾ ನಗರ, ಶೆಟ್ಟಿ ಕಾಲೇಜ್, ದಯಾಸಾಗರ ಕಾಲೊನಿ, ಕುಸನೂರ, ರಾಜೀವ ಗಾಂಧಿ ಯುನಿರ್ವಸಿಟಿ ಲಾಹೊಟಿ ಕಂಕರ ಮಶಿನ್, ಜೊಪಡ ಪಟ್ಟಿ.
ಪ್ರಶಾಂತ ನಗರ(ರಾಜಾಪುರ) ಫೀಡರ್: ಪ್ರಶಾಂತ ನಗರ ಎ, ಪ್ರಶಾಂತ ನಗರ ಬಿ, ಜಯನಗರ ಓಕಳಿ ಕ್ಯಾಂಪ್, ಈದ್ಗಾ ಮೈದಾನ, ನೃಪತುಂಗಾ ಕಾಲೋನಿ, ಶಹಾಬಾದ್ ಶಕ್ತಿ ನಗರ ಹಾಗೂ ಕಲ್ಯಾಣ ನಗರ.