ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಜೂ.11:ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 33ಕೆ.ವಿ. ಜಿ.ಐ.ಎಸ್. ಸ್ಟೇಶನ್ ಶಾಂತಿನಗರ ವ್ಯಾಪ್ತಿಯ ಈ ಕೆಳಕಂಡ ಫೀಡರ್‍ಗಳಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಶನಿವಾರ ಜೂನ್ 12 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು (ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೆ.ಇ.ಬಿ. ಕ್ವಾರ್ಟರ್ಸ್ ಫೀಡರ್: ಶಾಂತಿ ನಗರ, ವಿದ್ಯಾನಗರ, ಅಶೋಕ ನಗರ, ಎಮ್.ಎಸ್.ಕೆ. ಮಿಲ್ ಜಿಡಿಎ, ಖದೀರ್ ಚೌಕ್ ಹಾಗೂ ವಡ್ಡರ್ ಗಲ್ಲಿ.

ಸಮತಾ ಕಾಲೋನಿ ಫೀಡರ್: ಕೋರಿಮಠ, ಬ್ರಹ್ಮಪೂರ, ಧನಗರ ಗಲ್ಲಿ, ಬಸವ ನಗರ, ಸಮತಾ ಕಾಲೋನಿ, ಖಾನಿ ಏರಿಯಾ, ಶಹಾ ಹುಸೈನ್ ಚಿಲ್ಲಾ, ಬೊರಾಬಾಯಿ ನಗರ ಹಾಗೂ ಗಂಗಾ ನಗರ.

ಜಿಲ್ಲಾ ನ್ಯಾಯಾಲಯ ಫೀಡರ್: ಇಂದಿರಾ ನಗರ, ಪಿ.ವಿ. ಕೊಠಾರಿ ಭವನ, ಜಿಲ್ಲಾ ನ್ಯಾಯಾಲಯ, ಐ.ಡಿ.ಬಿ.ಐ. ಬ್ಯಾಂಕ್, ಮಾಲಕರೆಡ್ಡಿ ಆಸ್ಪತ್ರೆ ಸರೌಂಡಿಂಗ್ ಹಾಗೂ ತಿಮ್ಮಾಪೂರಿ ಚೌಕ್ ಏರೀಯಾ.

ಸಂಗಮೇಶ್ವರ ಫೀಡರ್: ರಾಮನಗರ, ಸಂಗಮೇಶ್ವರ ಕಾಲೋನಿ, ಆನಂದ ಹೋಟೆಲ್, ಎನ್.ವಿ. ಕಾಲೇಜ್ ಹಾಗೂ ಗಬರಾದಿ ಕಾಂಪ್ಲೇಕ್ಸ್.

ಅಶೋಕ ನಗರ ಫೀಡರ್: ಅಶೋಕ ನಗರ, ಎಂ.ಎಸ್.ಕೆ. ಮಿಲ್ ಜಿ.ಡಿ.ಎ., ಖದೀರ್ ಚೌಕ್, ಜಿಲಾನಾಬಾದ್ ಹಾಗೂ ಶಾಂತಿನಗರ.