ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಜೂ.04:ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ದುಬೈ ಕಾಲೋನಿ ಫೀಡರ್ ವ್ಯಾಪ್ತಿಯಲ್ಲಿ ಶನಿವಾರ ಜೂನ್ 5ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬ್ಯಾಂಕ್ ಕಾಲೋನಿ, ದರ್ಗಾ ಹಾಗೂ ಆದರ್ಶ ನಗರ ಫೀಡರ್‍ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು (ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ದುಬೈ ಕಾಲೋನಿ ಫೀಡರ್: ಎಮ್.ಜಿ. ಟಿ.ಟಿ., ಆಶ್ರಯ ಕಾಲೋನಿ, ದುಬೈ ಕಾಲೋನಿ, ಶೇಖ ರೋಜಾ ಜಿಡಿಎ, ಕಸ್ತೂರಿ ನಗರ, ಸುವರ್ಣ ನಗರ ಹಾಗೂ ಸ್ವಾರ್ಗೆಟ್ ನಗರ.

ಬ್ಯಾಂಕ್ ಕಾಲೋನಿ ಫೀಡರ್: ಮೋಮಿನಪುರ, ಕಾಸಾಯಿ ಮಸೀದ್, ಬೋವಿ ಗಲ್ಲಿ, ಸರಾಫ್ ಬಜಾರ್, ಪುಟಾಣಿಗಲ್ಲಿ, ಹುಮನಾಬಾದ ಬೇಸ್, ಕಿರಾಣಾ ಬಜಾರ, ಸರಾಫ್ ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  ದರ್ಗಾ ಫೀಡರ್: ಹೋಲಿ ಕಟ್ಟಾ, ಗಣೇಶ ಮಂದಿರ, ಚಪ್ಪಲ್ ಬಜಾರ್, ಮಕ್ತಾಮ್‍ಪುರ, ನ್ಯಾóಷನಲ್ ಚೌಕ್, ಚಟೇವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  ಆದರ್ಶ ನಗರ ಫೀಡರ್: ಶಿವಾಜಿ ನಗರ, ಅಬುಬಕರ್ ಕಾಲೋನಿ, ಕೆ.ಹೆಚ್.ಬಿ. ಕಾಲೋನಿ, ಒಕ್ಕಲ್ಗೇರಾ, ಬಿಲಾಲಾಬಾದ, ಕೆ.ಬಿ.ಎನ್. ಇಂಜಿನಿಯರಿಂಗ್ ಕಾಲೇಜ್, ಇಸ್ಲಾಮಾಬಾದ, ಕೆ.ಸಿ.ಟಿ. ಪಾಲಿಟೆಕ್ನಿಕ್, ಖಮರ್ ಕಾಲೋನಿ, ಎಸ್.ಬಿ.ಹೆಚ್. ಕಾಲೋನಿ, ಖಾಜಾ ಕಾಲೋನಿ, ಇ.ಬಿ.ರಾಜ, ಮದಿನಾ ಕಾಲೋನಿ, ಶಾಲಿಮಾರ ಫಂಕ್ಷನ್ ಹಾಲ್ ಪ್ರದೇಶ, ಧನಗರಗಲ್ಲಿ, ನೂರಬಾಗ್, ಸಯ್ಯದ್ ಗಲ್ಲಿ ಹಾಗೂ  ಸುತ್ತಮುತ್ತಲಿನ ಪ್ರದೇಶಗಳು.