ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಡಿ.20:ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದಲ್ಲಿ ಬರುವ ಕಲಬುರಗಿಯ 11ಕೆ.ವಿ. ಇಂಡಸ್ಟ್ರೀಯಲ್ ಫೀಡರ್ ವ್ಯಾಪ್ತಿಯಲ್ಲಿ ಡಿಸೆಂಬರ್ 21 ರಂದು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಫೀಡರ್ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಬಡಾವಣೆಗಳ ವಿವರ: ಶಹಾ ಬಜಾರ್ ಜಿ.ಡಿ.ಎ., ಶಹಾ ಬಜಾರ್, ಜೆ.ಆರ್. ನಗರ, ಎನ್.ಆರ್.ಕಾಲೋನಿ, ಮಾಣಿಕೇಶ್ವರಿ ಕಾಲೋನಿ, ಕೈಲಾಸ್ ನಗರ, ವಿಶ್ವರಾಧ್ಯ ಕಾಲೋನಿ, ಗದಲೇಗಾವ್ ಲೇಔಟ್, ಮಹಾಲಕ್ಷ್ಮೀ ಲೇಔಟ್, ಲಾಲ್‍ಗಿರಿ, ಅಗ್ರೀಕಲ್ಚರ್ ಲೇಔಟ್, ಸರಸ್ವತಿ ವಿದ್ಯಾಮಂದಿರ, ಕೋಕಿಲಮ್ಮ ಟೆಂಪಲ್ ಗಂಗಾ ನಗರ, ಹಳೇ ರಾಘವೇಂದ್ರ ಕಾಲೋನಿ ಮಾಣಿಕೇಶ್ವರ ಜಿ.ಡಿ.ಎ., ಜೋಡ್ ಯಲ್ಲಮ್ಮಾ ಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.