ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಡಿ.04:ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11 ಕೆ.ವಿ. ಜಿಲ್ಲಾ ನ್ಯಾಯಾಲಯ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣೆ ಕೆಲಸವಿರುವುದರಿಂದ ನಗರದ ಕೆಲ ಭಾಗಗಳಲ್ಲಿ ಇದೇ ಡಿಸೆಂಬರ್ 5 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕೃಷ್ಣ ದೇವಸ್ಥಾನ ಟಿಸಿ, ಟಿಎ ಪಾಟೀಲ್ ಟಿಸಿ, ಐಡಿಬಿಐ ಬ್ಯಾಂಕ್, ಪಾಟೀಲ್ ಕಿಡ್ನಿ ಆಸ್ಪತ್ರೆ, ಇಂದ್ರ ನಗರ, ಕಾಮರೆಡ್ಡಿ ಆಸ್ಪತ್ರೆ, ಸನ್‍ರೈಸ್ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ, ಎಸ್.ಬಿ.ಐ. ಬ್ಯಾಂಕ್, ಯುನೈಟೆಡ್ ಆಸ್ಪತ್ರೆ, ವಿಶಾಲ ಮೆಘಾ ಮಾರ್ಟ್, ರಾಮ್‍ನಗರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.