ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ನ.29:ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಜಿ.ಡಿ.ಎ., ಹೌಸಿಂಗ್ ಬೋರ್ಡ್, ಪೊಲೀಸ್ ಕಾಲೋನಿ, ನಂದಿಕೂರ ಮತ್ತು ನೃಪತುಂಗಾ ಕಾಲೋನಿ ಫೀಡರ್‍ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇದೇ ನವೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಜಿ.ಡಿ.ಎ. ಫೀಡರ್: ದರಿಯಾಪೂರ ಜಿ.ಡಿ.ಎ., ಕೋಟನೂರ್ ದರಿಯಾಪೂರ್ ಜಿ.ಡಿ.ಎ., ಕೋಟನೂರ್ ಜಿ.ಡಿ.ಎ. ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಹೌಸಿಂಗ್ ಬೋರ್ಡ ಫೀಡರ್: ಗಾಣದೇವತೆ, ಹೌಸಿಂಗ್ ಬೋರ್ಡ್, ಗಾಬ್ರೀ ಲೇಔಟ್, ಸಿದ್ದೇಶ್ವರ ಕಲ್ಯಾಣ ಮಂಟಪ, ಮೋಹನ್ ನಗರ, ಲಕ್ಷ್ಮೀ ನಾರಾಯಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಪೊಲೀಸ್ ಕಾಲೋನಿ ಫೀಡರ್: ಆರ್ಕಿಡ್ ಮಾಲ್, ಗ್ರ್ಯಾಂಡ್ ಹೊಟೇಲ್, ರಂಗಮಂದಿರ, ರೋಟರಿ ಕ್ಲಬ್, ಮೃಗಾಲಯ, ಕಾರ್ಪೋರೇಶನ ಕಚೇರಿ, ವೀರಶೈವ ಕಲ್ಯಾಣ ಮಂಟಪ, ಶರಣನಗರ, ಶರಣ ಬಸವೇಶ್ವರ ದೇವಸ್ಥಾನ, ವಿಠ್ಠಲನಗರದ 5 ಮತ್ತು 7 ನೇ ಕ್ರಾಸ್, ವೆಂಕವ್ವಾ ಮಾರುಕಟ್ಟೆ, ಗೋವಾ ಹೋಟೆಲ್ ಎದುರಿಗೆಯಿರುವ ಪ್ರದೇಶ, ಮೋರ್ ಆಸ್ಪತ್ರೆ, ಯತೀಮ್ ಖಾನಾ ಹಾಗೂ ಕೆಬಿಎನ್ ಆಸ್ಪತ್ರೆ.
ನಂದೀಕೋರ ಹಾಗೂ ನೃಪತುಂಗಾ ಕಾಲೋನಿ ಫೀಡರ್: ನಾಗನಳ್ಳಿ, ಕೆಸರಟಗಿ, ಕೆಸರಟಗಿ ತಾಂಡಾ, ಚಂದು ನಾಯಕ ತಾಂಡಾ, ನಂದಿಕೂರ ತಾಂಡಾ, ಕೂಡನೂರ, ಹುದಲೂರ, ತಾಂಡಾ. ಜಿ.ಡಿ.ಎ.ಕೋಟನೂರ ಪ್ರದೇಶ, ನ್ಯೂ ಓಝಾ ಲೇಔಟ್, ಧನಶೆಟ್ಟಿ ನಗರ ಹಾಗೂ ಸ್ಲಮ್ ಬೋರ್ಡ್ ವಸತಿ ಗೃಹಗಳು.