ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ನ.20:ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗ-1ರಲ್ಲಿ ಬರುವ ಕರಜಗಿ ವಿದ್ಯುತ್ ವಿತರಣಾ ಕೇಂದ್ರದ ಗೋಪುರವು ಪ್ರವಾಹದಿಂದ ಹಾನಿಗೊಳಗಾಗಿದ್ದು, ಇದರ ಮರು ಸ್ಥಾಪನೆ ಮಾಡುವ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ನ. 21 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಉಪ-ವಿತರಣಾ ಕೇಂದ್ರದ ಮೇಲೆ ಬರುವ ಈ ಕೆಳಕಂಡ ಫೀಡರ್‍ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಕರಜಗಿ, ಉಡಚಣ ಹಾಗೂ ಮಣ್ಣೂರ ವಿದ್ಯುತ್ ವಿತರಣಾ ಕೇಂದ್ರ: ಶಿವೂರ, ಉಡಚಣ, ನಂದರಗಾ, ಕರಜಗಿ ಎನ್.ಜೆ.ವಾಯ್, ಮಣ್ಣೂರ, ಗೌರ(ಬಿ), ಜೇವರ್ಗಿ ಎನ್.ಜೆ.ವಾಯ್, ಮಾಶಾಳ ಎನ್.ಜೆ.ವಾಯ್ ಹಾಗೂ ಬಿಂಗೊಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.