ವಿದ್ಯುತ್ ಸಮಸ್ಯೆ ಬಗೆಹರಿಸಲು ಮನವಿ


ಸಂಜೆವಾಣಿ ವಾರ್ತೆ
ಸಂಡೂರು: ಮಾ:28: ಸಂಡೂರು ತಾಲೂಕಿನ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ತಾಲೂಕಿನ ರೈತರು ಜೆಸ್ಕಾಂ ಅಧಿಕಾರಿಗಳಿಗೆ ಮನವಿಯನ್ನು ಮಾಡುವ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ರೈತ ಸಂಘದ ಅಧ್ಯಕ್ಷ ಮೇಟಿ ಚಂದ್ರಶೇಖರ ಒತ್ತಾಯಿಸಿದರು.
ಅವರು ಪಟ್ಟಣದ ಜೆಸ್ಕಾಂ ಸಂಡೂರು ವಿಭಾಗ, ಸಂಡೂರು ಇವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ  ರೈತ ಜಮೀನುಗಳಿಗೆ ಪಂಪ್‍ಸೆಟ್ ವಿದ್ಯುತ್ ಪೂರೈಕೆಯನ್ನು 7 ರಿಂದ 10 ಗಂಟೆಗಳ 2. ರೈತ ಜಮೀನುಗಳಿಗೆ ನೀರು ಹರಿಸಲು ಬೆಳಗಿನ ವಿದ್ಯುತ್ ಪೂರೈಕೆಯನ್ನು  (ಮುಂಜಾನೆ 6 ರಿಂದ ಸಂಜೆ 6) ರವರೆಗೆ ಒದಗಿಸಬೇಕು,  ಬೆಸುಗೆ ಕಾಲ ಇರುವುದರಿಂದ ಲೋಡ್ ಸೆಡ್ಡಿಂಗ್‍ನ್ನು ಕಡಿಮೆ ಮಾಡಿ ರೈತರಿಗೆ ಅನುಕೂಲವನ್ನು ಮಾಡಿಕೊಡಬೇಕು. ಏಕೆಂದರೆ ರೈತರಿಗೆ ಇಲ್ಲಿ ಯಾವುದೇ ತರಹದ ಕೆರೆಗಳಿಂದಾಗಲೇ, ಡ್ಯಾಂಗಳಿಂದಾಗಲೇ ನೀರು ಪೂರೈಕೆ ಇರುವುದಿಲ್ಲ, ಎಲ್ಲಾ ರೈತ ವರ್ಗದವರು ಪಂಪ್ ಸೆಟ್ ಮುಖಾಂತರವೇ ನೀರು ಹರಿಸುತ್ತಾರೆ.  ಸಂಡೂರು ತಾಲ್ಲೂಕುನಲ್ಲಿ ಬಹುತೇಕ ಕಡೆ ಬಾಗಿದ ಕಂಬಗಳು ಇಳಿ ಬಿದ್ದ ಲೈನುಗಳು ಗಿಡ-ಬಳ್ಳಿಗಳು ಹಬ್ಬಿರುವ ವಿದ್ಯುತ್ ಕಂಬಗಳ ಸರಿಪಡಿಸಬೇಕು. 5. ತೋಟಗಾರಿಕೆ ಬೆಳಾಗಳಾದ ಮಾವು, ಅಡಿಕೆ, ತೆಂಗು, ಎಳ್ಳದಲೆ ತೋಟಗಳು ಮತ್ತು ಜನ ವಸತಿ ಇರುವ ಕಡೆ ಕೇಬಲ ಮಾದರಿಯ ಲೈನು ಮುಖಾಂತರ ವಿದ್ಯುತ್ ಸರಬರಾಜು ಮಾಡಬೇಕು. ಟಿ.ಸಿ, ಸುಟ್ಟ 24 ತಾಸುಗಳಲ್ಲಿ ಬೇರೆ ಟಿಸಿ, ಅಳವಡಿಸಬೇಕು. ಈ ಮೇಲ್ಕಂಡ ಬೇಡಿಕೆಗಳು ಈ ಕೂಡಲೇ ಅನುಷ್ಠಾನಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ರೈತ ಬಾಂಧವರಿಂದ ಒತ್ತಾಯಸುತ್ತೇವೆ. ಎಂದು ಮನವಿ ಪತ್ರ ಸಲ್ಲಿಸಿದರು.