ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ

ಕೆ.ಆರ್.ಪುರ, ಜ.೬- ಸ್ಥಳೀಯ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ನೀಡುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್.ಪುರ ಕ್ಷೇತ್ರದ ಕೆ.ನಾರಾಯಣಪುರದಲ್ಲಿ ನಾಗವಾರದ ಉಪವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆ ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಲು ಉಪವಿಭಾಗ ಹೆಚ್ಚು ಪೂರಕವಾಗಿದ್ದು,ಈ ವಿಭಾಗದಿಂದ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯುತ್ತದೆ ಎಂದು ನುಡಿದರು.
ಕೆ.ನಾರಾಯಣ ಪುರ ಭಾಗದಲ್ಲಿ ೬ ಕೋಟಿ ರೂ. ಅಭಿವೃದ್ಧಿ ಕಾಮಾಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಲಾಗುವುದೆಂದು ನುಡಿದರು. ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕಾವೇರಿ ನೀರು ಕಲ್ಪಿಸಲಾಗುವುದು ಮತ್ತು ಒಳಚರಂಡಿ ವ್ಯವಸ್ಥೆ ಸಹ ಮಾಡಲಾಗುವುದೆಂದು ವಿವರಿಸಿದರು.
ಮುಖ್ಯ ಅಭಿಯಂತರ ಉಮೇಶ್,ಅಧೀಕ್ಷಕ ಮಾಲತೇಶ್,ಕಾರ್ಯಪಾಲಕ ಯೋಗೇಶ್ ಮುಖಂಡರಾದ ನಾಗೇನಹಳ್ಳಿ ಕೆ.ಲೋಕೇಶ್, ಚಿದಾನಂದ ಮೂರ್ತಿ, ಕೃಷ್ಣಮೂರ್ತಿ, ಶ್ರೀನಿವಾಸ ಗೌಡ,ಬೈರೇಗೌಡ,ರಾಮೇಗೌಡ,ನಾರಾಯಣಪ್ಪ,ಗೆದ್ದಲಹಳ್ಳಿ ನಾಗರಾಜ, ಕೆ.ನಾರಾಯಣಪುರ ಆರ್.ನಾಗರಾಜ್ ಇದ್ದರು