ವಿದ್ಯುತ್ ಶಾರ್ಟ್ ಸರ್ಕಿಟ್‍ಗೆ ಆಲಗೂಡ್ ಗ್ರಾಮದಲ್ಲಿ ಹೊತ್ತಿ ಉರಿದ ಮನೆ

ಕಲಬುರಗಿ:ಮೇ.15: ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಮನೆಯೊಂದು ಹೊತ್ತಿ ಉರಿದ ಘಟನೆ ತಾಲ್ಲೂಕಿನ ಆಲಗೂಡ್ ಗ್ರಾಮದಲ್ಲಿ ವರದಿಯಾಗಿದೆ. ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆಲಗೂಡ್ ಗ್ರಾಮದ ರೈತ ಸೈಬಣ್ಣ ಎನ್ನೋರಿಗೆ ಸೇರಿದ ಮನೆಯೇ ಬೆಂಕಿ ಗಾಹುತಿಯಾಗಿದೆ.
ಅಗ್ನಿ ಅನಾಹುತದಿಂದ ಮನೆಯಲ್ಲಿದ್ದ 20 ಸಾವಿರ ರೂ.ಗಳ ನಗದು ಹಣ, 7-8 ತೊಲೆ ಚಿನ್ನಾಭರಣ, ಧವಸಧಾನ್ಯ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಮನೆಯವರು ತಿಳಿಸಿದ್ದಾರೆ. ಮನೆಗೆ ಬೆಂಕಿ ಬಿದ್ದ ಹಿನ್ನೆಲೆ ಸೈಬಣ್ಣ ಕುಟುಂಬ ಅತಂತ್ರವಾಗಿದೆ.
ಬೆಂಕಿ ಹೊತ್ತಿಕೊಂಡಾಗ ಮನೆಯವರು ಯಾರೂ ಒಳಗಿರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .