ವಿದ್ಯುತ್ ಶಾಕ್: ಬಾಲಕ ಮೃತ್ಯು

ಕಾಸರಗೋಡು, ಡಿ.೨೭- ವಿದ್ಯುತ್ ಶಾಕ್ ತಗುಲಿ ೧೧ ವರ್ಷದ ಬಾಲಕ ಮೃತಪಟ್ಟ ಘಟನೆ ಶನಿವಾರ ಸಂಜೆ ನಗರ ಹೊರವಲಯದ ಅಣಂಗೂರುನಲ್ಲಿ ನಡೆದಿದೆ. ಅಣಂಗೂರು ಗ್ರೀನ್ ಪಾರ್ಕ್ ಪ್ಲಾಟ್‌ನ ತ್ವಾಹಿರ್ ಬಾನುರವರ ಪುತ್ರ ಮುಹಮ್ಮದ್ ಇಬುಹಾ ಮೃತಪಟ್ಟ ಬಾಲಕ. ಆಟವಾಡುತ್ತಿದ್ದ ಬಾಲಕ ಸಮೀಪದ ಅಂಗಡಿಯೊಂದರ ಗ್ರಿಲ್ಸ್ ಸ್ಪರ್ಶಿಸಿದಾಗ ಈ ಘಟನೆ ನಡೆದಿದೆ.
ಗ್ರಿಲ್ಸ್‌ಗೆ ವಿದ್ಯುತ್ ಪ್ರವಹಿಸುತ್ತಿತ್ತು ಎನ್ನಲಾಗಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.