ವಿದ್ಯುತ್ ಮೀಟರೀಕರಣ ಸುತ್ತೋಲೆ ವಿರೋದಿಸಿ ಜೇಸ್ಕಾಂ ಕಚೇರಿಗೆ ಮುತ್ತಿಗೆ

ಕಲಬುರಗಿ,ಅ.31- ವಿದ್ಯುತ್ ಮೀಟರೀಕರಣ ಸುತ್ತೋಲೆ ವಿರೋಧಿಸಿ ಹಾಗೂ ವಿದ್ಯುತ್ ದರ ಏರಿಕೆ ಧಿಕ್ಕರಿಸಿ, ನೀರಾವರಿ ಪಂಪ್ ಸೆಟ್ ರೈತರಿಗೆ ಹಗಲು ಹೊತ್ತಿನಲ್ಲಿ 12 ತಾಸು ವಿದ್ಯುತ್ ಪೂರೈಕೆ ಮಾಡಲು ಆಗ್ರಹಿಸಿ ವಿದ್ಯುತ್ ಖಾಸಗೀಕರಣ ನಿಲ್ಲಿಸಿ.2022 ರ ವಿದ್ಯುತ್ ಮಸೂದೆ ಹಿಂಪಡಿಯಲು ಒತ್ತಾಯಿಸಿ ಪಂಪ್ ಸೆಟ್ ಅಕ್ರಮ ಸಕ್ರಮ ರದ್ದು ಮಾಡಿ ನೀರಾವರಿ ರೈತರಿಗೆ ಬೀದಿಗೆ ತಳ್ಳಿದ ನೀತಿ ಖಂಡಿಸಿ ಟಿಸಿ ಸುಟ್ಟಿದ್ದ ತಕ್ಷಣವೇ ಟಿಸಿ ಕೂಡಿಸಲು. ಹಗಲು ಹೊತ್ತಿನಲ್ಲಿ ಕರೆಂಟ್ ಲೋಡ್ ಸೆಡ್ಡಿಂಗ್ ಕೈ ಬಿಡಬೇಕು. ಹೆಚ್ಚುವರಿ ಟಿಸಿ ಕೂಡಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಲಬುರಗಿ ಜೇಸ್ಕಾಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಂಡು ಜೇಸ್ಕಾಂ ಅಧಿಕಾರಿಗಳ ಮುಖಾಂತರ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ತÉೂಗರಿಯ ನಾಡಿನಲ್ಲಿ ಅನ್ನದಾತರ ರೊಕ್ಕದ ಮಾಲು ಹೆಸರು. ಉದ್ದು. ಸೊಯಾಬಿನ್. ತೊಗರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಮಾಡಿದ ಲಾಗುವಡಿ ಬರಲಾರದೆ ಸಾಲದ ಮಡುವಿನಲ್ಲಿ ಒಧದಾಡುವಂತಾಗಿದೆ ರೈತರ ಬದುಕು ಅಧೊಗತಿಯಾಗಿದೆ ಸಾಲದ ಭಾದೆ ತಾಳಲಾರದೆ ಬೇಸತ್ತ ರೈತರು ಸರಣಿ ಆತ್ಮಹತ್ಯೆ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ.ರೈತರ ನೀರಾವರಿ ಬೆಳೆಗಳಾದ ಕಬ್ಬು. ಬಾಳಿ.ಹತ್ತಿ.ಬದನೆಕಾಯಿ. ಬೆಂಡೆ ಕಾಯಿ. ಚವುಳಿ.ಸೆವಂತಿ ಹಿರಿ.ಟಮೊಟೊ.ಗೋಧಿ. ಸೇಂಗಾ ಕುಸುಬಿ ಬೆಳೆಗಳು ಕರೆಂಟ್ ಕೊರತೆಯಿಂದ ನಿರು ಉಣಿಸಲು ಆಗದೆ ಇರೊದರಿಂದ ತರಕಾರಿ ಬೆಳೆಗಳು ಒಣಗುತ್ತಿವೆ ಇದೆ ಬೆಳೆ ಮೇಲೆ ನಂಬಿ ಕುತ್ತಿರುವ ರೈತರು ಕಂಗಾಲಾಗಿದ್ದಾರೆ
ಪಂಪ್ ಸೆಟ್ ರೈತರ ಟಿಸಿ ಸುಟ್ಟರೆ 8 .ಮತ್ತು 9 .13 ದಿನ ಗತಿಸಿದರು ಟಿಸಿ ಕುಡಿಸುತ್ತಿಲ್ಲ ಬೆಳೆ ಒಣಗುತ್ತಿವೆ.ರೈತರ ಕೆಳಿದರೆ ಟಿಸಿ ಗಳು ನಮ್ಮ ಟ್ರಾನ್ಸ ಫಾರ್ಮ ಬ್ಯಾಂಕಗಳಲ್ಲಿ ಟಿಸಿ ಸ್ಟಾಕ್ ಇಲ್ಲ ಟಿಸಿ ದುರಸ್ತಿ ಆಗಿಲ್ಲ ನೆಪ ಹೆಳುತ್ತಿದ್ದಾರೆ ಮತ್ತು ಹಗಲು ಹೊತ್ತಿನಲ್ಲಿ ಕರೆಂಟ್ ಪದೆ ಪದೆ ಲೈನ್ ಟ್ರಿಪ್ ಮಾಡುತ್ತಾರೆ. ಹೀಗಾಗಿ ರೈತರಿಗೆ ನೀರು ಕಟ್ಟಲು ಆಗುತ್ತಿಲ್ಲ ಕರೆಂಟ್ ಮೋಟಾರು ಬಟನ್ ಹಾಕಿ ಬಂದ ಮಡಿಗಳಿಗೆ ನೀರು ಮುಟ್ಟಲ ಕರೆಂಟ್ ಟ್ರಿಪ್ ಆಗುತ್ತದೆ ನಿರು ಕಟ್ಟಲು ಆಗುತ್ತಿಲ್ಲ ಅಲ್ಲದೆ ರಾತ್ರಿ ವೇಳೆಯಲ್ಲಿ ತ್ರಿ ಫೇಸ್ ವಿದ್ಯುತ್ ಕೊಟ್ಟರೆ.
ಕಾರ್ಮಿಕರು ಬರಲ್ಲ ಮತ್ತು ಹಾವು ಚೇಳು ವಿಷಕಾರಿ ಹುಳಗಳು ಹಾವಳಿಯಿಂದ ರೈತರ ಜೀವಕ್ಕೆ ಏನಾದರು ಅನಾಹುತವಾದರೆ ಜವಾಬ್ದಾರಿ ಯಾರು ಹೊಣೆಗಾರಿಕೆ ಯಾರು ಇದು ರೈತ ವಿರೋಧಿ ನೀತಿ ಯಾಗಿದೆ .ಮತ್ತು 25 ಕೆವಿ ಟಿಸಿ ಮೇಲೆ ಕನಿಷ್ಟ ಇಲ್ಲಾ ಅಂದರೆ 11 ರಿಂದ 13 ಪಂಪ್ ಸೆಟ್ ಇವೆ ಅಲ್ಲದೇ 60 ಕೆವಿ ಟಿಸಿ ಮೇಲೆ ಕನಿಷ್ಟ ಅಂದರೆ 18 ರಿಂದ 24 ರ ವರೆಗೆ ಪಂಪ್ ಸೆಟ್ ಇವೆ ಹೀಗಾಗಿ ಟಿಸಿ ಮೇಲೆ ಕರೆಂಟ್ ಲೋಡ್ ಜಾಸ್ತಿಯಾಗಿ ಟಿಸಿ ಸುಡುತ್ತಿವೆ ಮತ್ತೊಂದು ಕಡೆ ಸಂಕಷ್ಟದಲ್ಲಿರುವ .ರೈತರ ಕರೆಂಟ್ ಮೋಟಾರು ಸುಟ್ಟ ದುರಸ್ತಿ ಮಾಡಕ್ಕು ಹಣ ಇಲ್ಲದೆ ರೈತರು ಪರದಾಡುವಂತಾಗಿದೆ ಇದು ಹೆಚ್ಚುವರಿ ಟಿಸಿ ಕುಡಿಸುವ ಬಗ್ಗೆ ಎಚ್ಚೆತ್ತು ಕೊಂಡು ಹೆಚ್ಚುವರಿ ಟಿಸಿ ಎಲ್ಲೆಲ್ಲಿ ಬೆಕಾಗುತ್ತದೆ ಎಂದು ಸರ್ವೇ ನಡೆಸಿ ಹೆಚ್ಚುವರಿ ಟಿಸಿ ಕೂಡಿಸಬೆಕು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆಯೆ ಏಪ್ರಿಲ್ ನಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರವನ್ನು ತಲಾ ಯುನಿಟ್ ಗೆ 7 ರೂ ಗೆ ಹೆಚ್ಚಳ ಮಾಡಿರುವುದು ಮತ್ತು ಸುಮಾರು 5 ,6 ಹಂತಗಳ ಸ್ಲಾಬ್ ದರ ಹೊಂದಿದ್ದ ವಿಧಾನವನ್ನು ಎರಡು ಹಂತಗಳಿಗೆ ಬದಲಾಯಿಸಿರುವುದು ವ್ಯಾಪಕ ಬೆಲೆ ಏರಿಕೆಗೆ ಕಾರಣವಾಗಲಿದೆ. ಇದು ರಾಜ್ಯದ ಅಭಿವೃದ್ದಿಗೆ ಮಾರಕವಾಗಿದ್ದು ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಅಗತ್ಯ ಕ್ರಮವಹಿಸಿ ಅದನ್ನು ತಡೆಯುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಕಲಬುರ್ಗಿ ಜಿಲ್ಲಾ ಸಮಿತಿಯು ಮುಖ್ಯ ಮಂತ್ರಿ ಶ್ರೀ ಸಿದ್ಧರಾಮಯ್ಯರವರನ್ನು ಬಲವಾಗಿ ಒತ್ತಾಯಿಸುತ್ತದೆ.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೇಟ್ಟಿ. ಎಂ ಬಿ ಸಜ್ಜನ, ಶಾಂತಾ ಎನ್ ಘಂಟೆ, ಮಲ್ಲಮ್ಮ ಮಗಿ, ಅಲ್ತಾಫ್ ಇನಾಮಂದಾರ. ನಾಗಯ್ಯಾ ಸ್ವಾಮಿ, ಶ್ರೀಮಂತ ಬಿರದ್ದಾರ, ಮೇಘ ರಾಜ ಕಠಾರೆ ಸೇರಿದಂತೆ ರೈತರು ಕೃಷಿಕರು ಭಾಗವಹಿಸಿದ್ದರು.