ವಿದ್ಯುತ್ ಬೆಲೆ ಏರಿಕೆ, ಪ್ರೋತ್ಸಾಹ ಧನ ಕಡಿತ ಖಂಡಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಗಂಗಾವತಿ:ಜೂ,6- ವಿದ್ಯುತ್ ಬೆಲೆ ಏರಿಕೆ ವಿರುದ್ಧ , ಹಾಲಿನ ಪ್ರೋತ್ಸಾಹಧನ ಕಡಿತ ಹಾಗೂ ಗೋ ಹತ್ಯಾ ಕಾನೂನು ರದ್ದತಿ ಖಂಡಿಸಿ ಬಿಜೆಪಿ ವತಿಯಿಂದ ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ  ಪ್ರತಿಭಟನೆ ತಹಶೀಲ್ ಕಾರ್ಯಾಲಯದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಮೊದಲು ತಮ್ಮ ಪ್ರಣಾಳಿಕೆ ಯಲ್ಲಿ ಹೇಳಿದ ಹಾಗೆಯೇ ಎಲ್ಲಾ ಗ್ಯಾರಂಟಿಗಳನ್ನು ಬೇಷರತ್ ನೀಡಬೇಕೆಂದು ಧಿಕ್ಕಾರ ಕೂಗಲಾಯಿತು. ಇದೇ ರೀತಿ ಮುಂದುವರೆದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

 ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾವ್ ಕುಲಕರ್ಣಿ, ವಕ್ತಾರರಾದ ವೀರಭದ್ರಪ್ಪ ನಾಯಕ, ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ನಗರಸಭೆ ಸದಸ್ಯರಾದ ನವೀನ್ ಮಾಲಿಪಾಟೀಲ, ವಾಸುದೇವ ನವಲಿ, ನೀಲಕಂಠ ಕಟ್ಟಿಮನಿ, ಪ್ರಮುಖರಾದ ಹನುಮಂತಪ್ಪ ಚೌಡ್ಕಿ, ವೀರಭದ್ರಪ್ಪ ಗುಡಗುಂಟಿ, ಪರಶುರಾಮ ನಾಯಕ, ವಿಟಪ್ಪ ತಳಕಲ್, ಯುವ ಮೋರ್ಚ ಅಧ್ಯಕ್ಷರಾದ ವೆಂಕಟೇಶ ಕೆ, ಮಹಿಳಾ ಮೋರ್ಚ ಅಧ್ಯಕ್ಷರಾದ ಶ್ತೀಮತಿ ರೇಖಾ ರಾಯಬಾಗಿ, ಶೋಭಾ ರಾಯ್ಕರ್, ಪ್ರಧಾನ ಕಾರ್ಯದರ್ಶಿಗಳಾದ ಸಂಗಯ್ಯ ಸಂಶಿಮಠ, ಶ್ರೀನಿವಾಸ ಧೂಳ ಉಪಸ್ಥಿತರಿದ್ದರು.