ವಿದ್ಯುತ್ ಬೀದಿ ದೀಪ ಅಳವಡಿಸಲು ಆಗ್ರಹ

ಕಲಬುರಗಿ:ಆ.13: ಹಿಂದಿನ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯು ನಗರದ ಖಾದ್ರಿ ಚೌಕ ನಿಂದ ಆಳಂದ ಚೆಕ್ ಪೆÇೀಸ್ಟ್ ವರೆಗೆ ಕೆ.ಕೆ.ಆರ್.ಡಿ.ಬಿ ವತಿಯಿಂದ ಬೀದಿ ದೀಪ ಅಳವಡಿಸಲಾಗಿತ್ತು.ಆದರೆ ಈ ಬೀದಿ ದೀಪಗಳು ಅಳವಡಿಸಿದರು ಕೂಡಾ ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಯುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ) ಅವರು ಹಿಂದಿನ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಶಾಹಬಜಾರ ನಾಕಾದಿಂದ ಆಳಂದ ಚೆಕಪೆÇೀಸ್ಟ ಗೆ ಹೋಗುವ ಮಾರ್ಗದ ಖಾದ್ರಿ ಚೌಕ ವೃತದಲ್ಲಿ ಅಳವಡಿಸಿರುವ ಕಂಬಗಳು ಲೆಕ್ಕಕ್ಕುಂಟು, ಕೆಲಸಕಿಲ್ಲ’ ಎನ್ನುವಂತಾಗಿದೆ. ಇಲ್ಲಿನ ಕಂಬಗಳಲ್ಲಿ ದೀಪಗಳು ಹೊತ್ತಿ ಉರಿದು ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ವರ್ಷಗಳೇ ಕಳೆದಿವೆ. ಆಳಂದ ಕಡೆ ಸಾಗುವ ಈ ಮಾರ್ಗದಲ್ಲಿ ನಿತ್ಯ ತರಕಾರಿ,ಹೂವು ಮಾರುಕಟ್ಟೆಗಾಗಿ ನೂರಾರು ವಾಹನಗಳು ಸಂಚರಿಸುತ್ತವೆ.ಸದಾ ವಾಹನ ಮತ್ತು ಜನದಟ್ಟಣೆಯಿಂದ ಕೂಡಿರುವ ರಸ್ತೆಯಲ್ಲಿಯೇ ನೆಪ ಮಾತ್ರಕ್ಕೆ ಸಿಗ್ನಲ್ ಕಂಬಗಳನ್ನು ನೆಟ್ಟು ಕೈತೊಳೆದುಕೊಂಡಿರುವ ಸಂಚಾರ ಪೆÇೀಲಿಸರು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದರು. ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರಕಾರದಿಂದ ಕೆ.ಕೆ.ಆರ್.ಡಿ.ಬಿ ಗೆ ವಿದ್ಯುತ್ ಬೀದಿ ದೀಪಗಳ ಕೊರತೆಗೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಲಾಗಿತ್ತು.ಆದರೆ ಇದುವರೆಗೂ ಈ ಹಿಂದೆ ಇದ್ದ ಬಿಜೆಪಿ ನೇತೃತ್ವದ ಸರಕಾರವು ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದೆ ಎಂದು ಅವರು ಆರೋಪಿಸಿದರು. ಕೂಡಲೇ ಈ ಬೀದಿ ದೀಪಗಳಿಗೆ ವಿದ್ಯುತ್ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.