ವಿದ್ಯುತ್ ಬಿಲ್ ಮನ್ನಾ ಮಾಡಿ: ಡಾ.ರವಿ ಚವ್ಹಾಣ

ಕಲಬುರಗಿ :ಜೂ.11: ಕರೊನಾ 2 ಅಲೇ ಯಿಂದ ಇಡಿ ಜಗತ್ತು ತತ್ತರಿಸಿಹೋಗಿದು ಜನರು 2 ತಿಂಗಳಿನಿಂದ ಕೆಲಸ ವಿಲ್ಲದೆ ಕೈಯಲ್ಲಿ ಹಣ ವಿಲ್ಲದೆ ಒಂದು ಹೋತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದು ಆದಕಾರಣ ಸರ್ಕಾರ ಜೇಸ್ಕಾಂ ಇಲಾಖೆಯ 2 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಡಾ ರವಿ ಚವ್ಹಾಣ ಆಗ್ರಹಿಸಿದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಲಾಕಡೌನ್ ಇರುವ ಕಾರಣ ಕೆಲಸ ವಿಲ್ಲದೆ ಜನ ತುಂಬಾ ಕಷ್ಟದಲ್ಲಿ ಇದ್ದಾರೆ ಆದಕಾರಣ ಸರ್ಕಾರ ಜೇಸ್ಕಾಂ ವಿದ್ಯುತ್ ಬಿಲ್ ಹಾಗೂ ಮನೆ ಟ್ಯಾಕ್ಸ್ , ನೀರಿನ ಟ್ಯಾಕ್ಸ್ ಹಾಗೂ ಬ್ಯಾಂಕಿನ ಸಾಲದ 2 ತಿಂಗಳ ಬಡ್ಡಿ ಮನ್ನಾ ಮಾಡಬೇಕು ಹಾಗೂ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 10ಸಾವಿರ ರೂ ಪರಿಹಾರ ನೀಡಬೇಕು . ರೇಷನ ಅಕ್ಕಿಯನ್ನು ಇನ್ನು ಹೆಚ್ಚಿಸಬೇಕು, ಹಾಗೂ ಕೋವಿಡ್ ನಿಂದ ಮೃತ ಪಟ್ಟ ಕುಟುಂಬಕ್ಕೆ 10ಲಕ್ಷ ಪರಿಹಾರ ನೀಡಬೇಕು. ಎಂದು ಡಾ ರವಿ ಚವ್ಹಾಣ ಪ್ರಕಟಣೆಯಲ್ಲಿ ಒತ್ತಾಯಿಸಿದಾರೆ.