ವಿದ್ಯುತ್ ಪ್ರವಹಿಸಿ ಕೃಷಿಕ ಮೃತ್ಯು

ಪಡುಬಿದ್ರಿ, ಮೇ ೧೬- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಪ್ರವಹಿಸಿ ಕೃಷಿಕರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಲ್ಲೂರಿನಲ್ಲಿ ನಡೆದಿದೆ.
ಇಲ್ಲಿನ ಗುರುಗುಂಡಿ ಕುದಿಮಾರು ರಮೇಶ್ ಪೂಜಾರಿ (೫೧) ಮೃತರು. ಕೃಷಿಕರಾಗಿರುವ ಇವರು ಮನೆ ಸಮೀಪದ ತೋಟದಲ್ಲಿ ಕಾಯಿ ಹೆಕ್ಕಲು ತೆರಳಿದ್ದರು. ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪರಿಸರದಲ್ಲಿ ಹಲವಾರು ಬಾರಿ ತುಂಡಾಗಿ ದುರಸ್ತಿ ಮಾಡಿರುವ ವಿದ್ಯುತ್ ತಂತಿ ಹಾಗೂ ಹಳೆಯದಾದ ವಿದ್ಯುತ್ ಕಂಬದಿಂದ ಅಪಾಯ ವಾಗುತ್ತಿರುವ ಬಗ್ಗೆ ಮೆಸ್ಕಾಂ ಗಮನಕ್ಕೂ ತರಲಾಗಿತ್ತು. ಈ ಬಗ್ಗೆ ಯಾವುದೇ ಕ್ರಮ ವಹಿಸದ ಕಾರಣ ಅನಾಹುತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.