ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕಲಬುರಗಿ,ಸೆ.25: ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಸೆ.26 (ರವಿವಾರ) ನಿರ್ವಹಣಾ ಕೆಲಸ ಕೈಗೆತ್ತಿಕೊಂಡಿದ್ದರಿಂದ ನಗರದ 33 ಕೆ.ವಿ. ಶಾಂತಿ ನಗರ ಸ್ಟೇಷನ್ ವ್ಯಾಪ್ತಿಯ ಫೀಡರ್‍ಗಳಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಹಾಗೂ 44 ಸರ್ವಿಸ್ ಸ್ಟೇಷನ್ ಹಾಗೂ 33 ಕೆ.ವಿ. ತೆಂಗಳಿ ಲೇಔಟ್ ಸ್ಟೇಷನ್ ವ್ಯಾಪ್ತಿಯ ಫೀಡರ್‍ಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಸದರಿ ಸ್ಟೇಷನ್‍ಗಳ ವ್ಯಾಪ್ತಿಯ ವಿವಿಧ ಫೀಡರ್‍ಗಳಲ್ಲಿ ಬರುವ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕೋರಿದ್ದಾರೆ.
ಸ್ಟೇಷನ್, ಫೀಡರ್ ಮತ್ತು ವಿದ್ಯುತ್ ವ್ಯತ್ಯಯ ಉಂಟಾಗುವ ಬಡಾವಣೆಗಳ ವಿವರ ಇಂತಿದೆ.
33 ಕೆ.ವಿ. ಶಾಂತಿ ನಗರ ಸ್ಟೇಷನ್ ವ್ಯಾಪ್ತಿಯ 11ಕೆ.ವಿ ಕೆ.ಇ.ಬಿ ಕಾಲೋನಿ ಫೀಡರ್‍ನಲ್ಲಿ ಬರುವ ಶಾಂತಿ ನಗರ, ವಿದ್ಯಾ ನಗರ ಹಾಗೂ ವಡ್ಡರಗಲ್ಲಿ. 11ಕೆ.ವಿ ಸಮತಾ ಕಾಲೋನಿ ಫೀಡರ್‍ನಲ್ಲಿ ಬರುವ ಕೋರಿಮಠ, ಬ್ರಹ್ಮಪೂರ, ಧನಗರಗಲ್ಲಿ, ಬಸವ ನಗರ, ಸಮತಾ ಕಲೋನಿ, ಖಾನಿ ಏರಿಯಾ, ಶಹಾ ಹುಸೈನ್ ಚಿಲ್ಲಾ, ಬೋರಾಬಾಯಿ ನಗರ ಹಾಗೂ ಗಂಗಾ ನಗರ.
11ಕೆ.ವಿ ಜಿಲ್ಲಾ ನ್ಯಾಯಾಲಯ ಫೀಡರ್‍ನಲ್ಲಿ ಬರುವ ಇಂದಿರಾ ನಗರ, ಪಿ.ವಿ. ಕೊಠಾರಿ ಭವನ, ಜಿಲ್ಲಾ ನ್ಯಾಯಾಲಯ, ಐ.ಡಿ.ಬಿ.ಐ. ಬ್ಯಾಂಕ್, ಮಲಕರೆಡ್ಡಿ ಆಸ್ಪತ್ರೆ, ಸರೌಂಡಿಂಗ್ ಹಾಗೂ ತಿಮ್ಮಾಪೂರಿ ಚೌಕ್ ಪ್ರದೇಶ. 11ಕೆ.ವಿ ಸಂಗಮೇಶ್ವರ ಫೀಡರ್‍ನಲ್ಲಿ ಬರುವ ರಾಮ ನಗರ, ಸಂಗಮೇಶ್ವರ ಕಾಲೋನಿ, ಆನಂದ ಹೋಟೆಲ್, ಎನ್.ವಿ. ಕಾಲೇಜು ಹಾಗೂ ಗಬರಾದಿ ಕಾಂಪ್ಲೆಕ್ಸ್.
11ಕೆ.ವಿ. ಅಶೋಕ ನಗರ ಫೀಡರ್‍ನಲ್ಲಿ ಬರುವ ಅಶೋಕ ನಗರ, ಎಂ.ಎಸ್.ಕೆ. ಮಿಲ್ ಜಿ.ಡಿ.ಎ., ಖಾದೀರ್ ಚೌಕ್, ಜಿಲಾನಾಬಾದ್, ಶಾಂತಿ ನಗರ. 11ಕೆ.ವಿ. ಸಿದ್ದಾರ್ಥ ನಗರ ಫೀಡರ್‍ನಲ್ಲಿ ಬರುವ ಸಿ.ಐ.ಬಿ ಕಾಲೋನಿ, ಶಕ್ತಿ ನಗರ, ಘಾಟಗೆ ಲೇಔಟ್, ಕಾಂತಾ ಕಾಲೋನಿ, ಎಂ.ಎಸ್.ಕೆ. ಮಿಲ್, ಗೋದುತಾಯಿ ನಗರ, ಭಗವತಿ ನಗರ, ಕೇಡೆಕರ್ ಲೇಔಟ್, ಕೋತಂಬರಿ ಲೇಔಟ್ ಹಾಗೂ ಕೇಂದ್ರ ಬಸ್ ನಿಲ್ದಾಣದ ಹಿಂದುಗಡೆ ಇರುವ ಪ್ರದೇಶ.
44 ಸರ್ವಿಸ್ ಸ್ಟೇಷನ್ ವ್ಯಾಪ್ತಿಯ 11ಕೆ.ವಿ ಸರಫ್ ಬಜಾರ್ ಮತ್ತು ಗಾಜಿಪೂರ ಫೀಡರ್‍ನಲ್ಲಿ ಬರುವ ಮಕ್ತಾಂಪೂರ, ಅತ್ತರ ಕಂಪೌಂಡ್, ಸೂಪರ್ ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ ಮಿಲನ್ ಚೌಕ್, ಬಿ.ಎಸ್.ಎನ್.ಎಲ್. ಫೀಡರ್ ನಲ್ಲಿ ಬರುವ ಸೂಪರ್ ಮಾರ್ಕೆಟ್, ನಮೋಶಿ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 11 ಕೆ.ವಿ. ಲಾಲ್ ಗಿರಿ ಫೀಡರ್‍ನಲ್ಲಿ ಬರುವ ಲಾಲ್‍ಗಿರಿ ಕ್ರಾಸ್, ಮಹಾಲಕ್ಷ್ಮೀ ಲೇಔಟ್, ಬಾಳೆ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
33 ಕೆ.ವಿ. ತೆಂಗಳಿ ಲೇಔಟ್ ಸ್ಟೇಷನ್ ವ್ಯಾಪ್ತಿಯ 11ಕೆ.ವಿ. ರಫೀಕ್ ಚೌಕ್ ಫೀಡರ್‍ನಲ್ಲಿ ಬರುವ ಮೆಕ್ಕಾ ಕಾಲೋನಿ, ಹಾಗರಗಾ ಕ್ರಾಸ್, ಜುಬೇರ್ ಕಾಲೋನಿ, ಉಮರ್ ಕಾಲೋನಿ, ಬುಲಂದ್ ಪರವೇಜ್ ಕಾಲೋನಿ, ರಫೀಕ್ ಚೌಕ್, ನೂರಾನಿ ಮೊಹಲ್ಲಾ, ಅರಾಬಿಕ್ ಶಾಲೆ, ಇಸ್ಲಾಮಾಬಾದ್ ಕಾಲೋನಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. 11ಕೆ.ವಿ. ಮಿಲ್ಲತ್ ನಗರ ಫೀಡರ್‍ನಲ್ಲಿ ಬರುವ ಸೋನಿಯಾ ಗಾಂಧಿ ಕಾಲೋನಿ, ಅಮನ್ ನಗರ, ಇತಿಹತ್ ಕಾಲೋನಿ, ಹಮ್‍ದರ್ದ್ ಕಾಲೋನಿ, ಇಸ್ಮಾಯಿಲ್ ಟಿಸಿ., ಸಪ್ನಾ ಬೇಕರಿ ಟಿ.ಸಿ., ಲೂಬಿಕ್ ಫಂಕ್ಸನ್ ಹಾಲ್, ಮಾಲಗತ್ತಿ ಕ್ರಾಸ್, ಡೆಕ್ಕನ್ ಕಾಲೇಜ್, ಮಿಲ್ಲತ್ ನಗರ, ಖಂಡಾಲ ಗ್ರೌಂಡ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಲಾಹೋಟಿ ಫೀಡರ್‍ನಲ್ಲಿ ಬರುವ ಕೆ.ಐ.ಎ.ಡಿ.ಬಿ. ಒಂದನೇ ಸ್ಟೇಜ್, ಕಪನೂರ್ ಇಂಡಷ್ಟ್ರೀಯಲ್ ಏರಿಯಾ, ನಾಗೇಂದ್ರ ಕ್ಯಾಂಟಿನ್, ಶಿವಾ ಹೋಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ. ಕೈಲಾಸ್ ಫೀಡರ್ ನಲ್ಲಿ ಬರುವ ಕೆ.ಐ.ಎ.ಡಿ.ಬಿ. 1 ಸ್ಟೇಜ್, ಕಪನೂರ್ ಇಂಡಷ್ಟ್ರೀಯಲ್ ಏರಿಯಾ, ಹುಮನಾಬಾದ್ ಚೆಕ್ ಪೋಸ್ಟ, ಎಸ್.ಸಿ. ಓಣಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳು.