ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಬೈಲಹೊಂಗಲ,ಜೂ16: ತಾಲೂಕಿನ ಮಲ್ಲಮ್ಮನ ಬೆಳವಡಿ ವಿದ್ಯುತ್ ಶಾಖೆ ನಿಯಂತ್ರಣ ಕಚೇರಿ ವ್ಯಾಪ್ತಿಗೆ ಬರುವ ದೊಡವಾಡ,ಗುಡಿಕಟ್ಟಿ, ನನಗುಂಡಿಕೊಪ್ಪ, ಚಿಕ್ಕಬೆಳ್ಳಿಕಟ್ಟಿ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮತ್ತು ಏಕಾಏಕಿ ವಿದ್ಯುತ್ ದರದ ಹೆಚ್ಚಳವನ್ನು ಖಂಡಿಸಿ ಈ ಗ್ರಾಮಗಳ ರೈತರು ಮಲ್ಲಮ್ಮನ ಬೆಳವಡಿಯ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ರೈತರ ಪರವಾಗಿ ಮಾತನಾಡಿದ ಶ್ರೀ ಸೋಮೇಶ್ವರ ಶುಗರ್ಸ್ ನಿರ್ದೇಶಕ ನಿಂಗಪ್ಪ ಚೌಡನ್ನವರ, ಗದಿಗೆಪ್ಪ ಅರಳಿಮರದ, ಮಹಾಂತೇಶ ಹೊಂಗಲ, ಬೆಳವಡಿ ವಿಭಾಗದ ಅನೇಕ ಗ್ರಾಮಗಳ ರೈತರ ಪಂಪಸೆಟ್ ಗಳಿಗೆ ಹಗಲು ಹೊತ್ತಿನಲ್ಲೇ 6 ತಾಸು ತ್ರೀ ಫೇಸ್ ಇದು ಪೂರೈಕೆ ಮಾಡುತ್ತಿದ್ದಾರೆ ಆದರೆ ದೊಡವಾಡ ನಂಗೊಂಡಿಕೊಪ್ಪ ಗೋವನಕೊಪ್ಪ ಗುಡಕಟ್ಟಿ ಚಿಕ್ಕಬೆಳ್ಳಿಕಟ್ಟಿ ಗ್ರಾಮಗಳ ರೈತರ ಪಂಪಸೆಟ್ ಗಳಿಗೆ ರಾತ್ರಿ ಹೊತ್ತು ತ್ರಿ ಫೇಸ್ ವಿದ್ಯುತ್ ಮಾತ್ರ ಪೂರೈಸುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ಕಳೆದ ವರ್ಷ ಡಿಸೆಂಬರ್ ನಲ್ಲಿ ನಾವು ಉಗ್ರ ಹೋರಾಟ ಮಾಡಿದ್ದೇವು.
ಆ ಸಂದರ್ಭದಲ್ಲಿ ಬೆಳವಡಿಯ ಶಾಖಾಧಿಕಾರಿಗಳು ಲಿಖಿತ ಪತ್ರವನ್ನು ಕೊಟ್ಟು ಹಗಲು ಹೊತ್ತಿನಲ್ಲಿ ಏಳು ತಾಸು ತಿರ್ಪೆಸ್ ವಿದ್ಯುತ್ ಪೂರೈಸುವುದಾಗಿ ಮಾತು ಕೊಟ್ಟಿದ್ದರು. ಈಗ ಆರು ತಿಂಗಳು ಕಳೆದರೂ ಆ ಮಾತಿನಂತೆ ನಡೆದುಕೊಳ್ಳದೆ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಅಲ್ಲದೆ ವಿದ್ಯುತ್ ದರಗಳನ್ನು ಏಕಾಏಕಿ ಹೆಚ್ಚಿಸಿದ್ದರಿಂದ ಕಳೆದ ತಿಂಗಳಿಗಿಂತ ದುಪ್ಪಟ್ಟು ವಿದ್ಯುತ್ ಬಿಲ್ ಬಂದಿದ್ದು ಜನತೆ ಕಂಗಲಾಗಿದ್ದಾರೆ.
ಇನ್ನೊಂದು ವಾರದಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸದೆ ಹೋದರೆ ತಾಲೂಕು ವಿದ್ಯುತ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಇದೆ ವೇಳೆ ಅವರು ಅಧಿಕಾರಿಗಳನ್ನು ಎಚ್ಚರಿಸಿದರು. ವಿವಿಧ ಗ್ರಾಮಗಳ ರೈತರಾದ ಶ್ರೀಶೈಲ ಅನಿಕಿವಿ, ಈರಪ್ಪ ನರೇಂದ್ರ, ಅಡಿವೆಪ್ಪ ಗುಂಡ್ಲೂರ, ಈರಪ್ಪ ಕಿಂದರಿ, ಪಾಲಾಕ್ಷ ಆನಿಕಿವಿ, ನಿಂಗಪ್ಪ ಚಬ್ಬಿ, ಪತ್ರಪ್ಪ ಮುದೇನೂರು, ಮಾಂತೇಶ್ ಚೌಡನ್ನವರ, ದ್ಯಾಮಣ್ಣ ಸಂಗೊಳ್ಳಿ, ಈರಣ್ಣ ಚಂದರಗಿ, ಶಂಕರ್ ಚೌಡನ್ನವರ ಹಾಗೂ ಅನೇಕ ರೈತರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.