ವಿದ್ಯುತ್ ಪರಿವರ್ತಕ ಬೆಂಕಿ ಸುಟ್ಟು ಭಸ್ಮ

ರಾಯಚೂರು, ಮಾ.೩೦- ಬಿಸಲಿನ ತಾಪಮಾನ ತೀವ್ರ ಏರಿಕೆಯಿಂದ ಮೂರು ವಿದ್ಯುತ್ ಪರಿವರ್ತಕಗಳು ಸುಟ್ಟು ಭಸ್ಮವಾಗಿರುವ ಘಟನೆ ನಗರದ ೨೦೦ ಕೆಇಬಿ ಸ್ವೀಕರಣ ಕೇಂದ್ರದಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಬಿಸಲಿನ ತಾಪಮಾನ ತೀವ್ರತೆ ಪಡೆದುಕೊಂಡ ಹಿನ್ನಲೆ
ರಾತ್ರಿ ವೇಳೆ ವಿದ್ಯುತ್ ಪರಿವರ್ತಕಗಳಲ್ಲಿ ಏಕಾಏಕಿ ಬೆಂಕಿ ಹಚ್ಚಿಕೊಂಡಿದೆ. ಬಿಸಲಿನ ವೇಗಕ್ಕೆ ವಿದ್ಯುತ್ ಪರಿವರ್ತಕಗಳು ಸೇರಿ ಅಲ್ಲಿರುವ ವಿದ್ಯುತ್ ವೈರ್ ಗಳು ಸಂಪೂರ್ಣ ಸುಟ್ಟು ಹೋಗಿವೆ ಎನ್ನಲಾಗಿದೆ.
ವಿದ್ಯುತ್ ಕಡಿತದಿಂದ ನಗರ ಸೇರಿದಂತೆ ಸುತ್ತಮುತ್ತ ಲಿನ ಪ್ರದೇಶದ ಜನರು ಕತ್ತಲೆಯಲ್ಲಿ ಕಳೆಯುವಂತೆ ಮಾಡಿತು. ಬೇಸಿಗೆ ಹಿನ್ನಲೆ ವಿಪರೀತ ತಾಪಮಾನ ಹೆಚ್ಚಳವಾಗಿದೆ, ವಿದ್ಯುತ್ ಇಲ್ಲದೆ ರಾತ್ರಿ ನಿದ್ದೆಯೂ ಇಲ್ಲದಂತೆ ಜನರು ಜಾಗರಣೆ ಮಾಡಿದರು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿಯನ್ನು ನಂದಿಸಿದರು.