ವಿದ್ಯುತ್ ಧರ ಏರಿಕೆ ಖಂಡಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜೂ.24 ರಾಜ್ಯ ಸರ್ಕಾರ ವಿದ್ಯುತ್ ಧರ ಏರಿಕೆ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಛೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ ಹಾಗೂ ವಿವಿಧ ಸಂಘದನೆಗಳ ಪದಾಧಿಕಾರಿಗಳು ಬೆಲೆ ಏರಿಕೆ ಖಂಡಿಸಿ, ಪ್ರತಿಭಟನೆ ಮಾಡುವ ಮೂಲಕ, ಗುರುವಾರ ರಾಜ್ಯ ಸರ್ಕಾಕ್ಕೆ ಮನವಿ ಸಲ್ಲಿಸಿದರು.
ಮನವಿಪತ್ರ ಸಲ್ಲಿಸಿದ ಬಳಿಕ ಛೇಂಬರ್ಸ್ ಆಫ್ ಕಾಮರ್ಸ್‍ನ ತಾಲೂಕು ಕಾರ್ಯದರ್ಶಿ ಕೋರ್‍ಗಲ್ ಗಿರಿರಾಜ್ ಮಾತನಾಡಿ, ರಾಜ್ಯದ ಜನತೆಯ ಮನಗೆದ್ದು ಮತ್ತೊಂದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವ ಸಿದ್ಧರಾಮಯ್ಯನವರಿಗೆ, ಸಂಘಟನೆಯ ಪರವಾಗಿ ಅನಂತಕೋಟಿ ನಮನಗಳು. ಆದರೆ, ಕರೋನಾ ಸಂಕಷ್ಟದ ಸಮಯದಲ್ಲಿ ಸಣ್ಣ-ಮಾಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಹಾಗೂ ವರ್ತಕರು ಅಪಾರ ನಷ್ಟ ಹಾಗೂ ಅನೇಕ ತೊಂದರೆ ಕೂಡ ಅನುಭವಿಸಿದ್ದಾರೆ. ಈಗತಾನೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಈ ರೀತಿಯ ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೂಡಲೆ ಮೂಲ ವಿದ್ಯುತ್ ಧರ ನಿಗಧಿಯಾಗಬೇಕು. ಇದರಿಂದ ಕಾರ್ಖಾನೆ, ಕಾರ್ಮಿಕರಿಗೂ ಮತ್ತು ವ್ಯಾಪಾರಿಗಳಿಗೂ ಅದರಲ್ಲೂ ಸಣ್ಣ-ಮಾಧ್ಯಮ ಕೈಗಾರಿಕೆಗಳನ್ನು ಉಳಿಸಬೇಕಾಗಿದೆ ಎಂದರು. ಕೂಡಲೆ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳೆಯವರು ಮನವಿ ಸ್ವೀಕರಿಸಿದರು, ಈ ವೇಳೆ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಶಿವಣ್ಣ, ಸದಸ್ಯರಾದ ವೈಭವ ಚಿದ್ರಿ, ಪ್ರಕಾಶ್, ವಿಜಯಕುಮಾರ್, ಬಸವರಾಜ್, ಜವಳಿ ವರ್ತಕರ ಸಂಘದ ಕಾರ್ಯದರ್ಶಿ ಕರಿಬಸಪ್ಪ ಉದಗಟ್ಟಿ, ಉಪಾಧ್ಯಕ್ಷ ಶ್ರೀಪಾಲ್, ಸಾಲ್ಮನಿ ನಾಗರಾಜ್, ವಿಷನ್‍ಸಿಂಗ್, ನೇಮಸಿಂಗ್, ಅಶೋಕ ಪಾಟೀಲ್, ಸಾವರಾಮ್, ಯೋಗೇಶ್, ಹಾರ್ಡ್‍ವೇರ್ ವರ್ತಕರ ಸಂಘದ ಅಧ್ಯಕ್ಷ ಮುಖೇಶ್ ಮತ್ತಿತರರು ಇದ್ದರು.

One attachment • Scanned by Gmail