ವಿದ್ಯುತ್ ದೀಪ ಲೋಕಾರ್ಪಣೆ

ಹುಬ್ಬಳ್ಳಿ,ಮಾ11: ಪೂರ್ವ ವಿಧಾನಸಭಾ ಕ್ಷೇತ್ರದ ಮಂಟೂರು ರಸ್ತೆಯಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿದ ಅಲಂಕಾರಿಕ ಕ್ರಾನಿಕಲ್ ವಿದ್ಯುತ್‍ದೀಪ ಲೋಕಾರ್ಪಣೆ ಮಾಡುವ ಮೂಲಕ ಶಾಸಕರು, ಸ್ಲಂ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಇಲ್ಲಿನ ಮಂಟೂರು ರಸ್ತೆಯನ್ನು ಜಗಮಗಿಸುವಂತೆ ಮಾಡಿದ್ದಾರೆ.
ಅವರು, ಶನಿವಾರ ಸಂಜೆ ಪೂರ್ವ ಕ್ಷೇತ್ರದ ವಾರ್ಡ್ ಸಂಖ್ಯೆ 62ರಲ್ಲಿ ಬರುವ ಕೆಇಬಿ ವೃತ್ತದಿಂದ ಮಂಟೂರು ರಸ್ತೆ ಸುಣ್ಣದ ಭಟ್ಟಿ ವರೆಗೆ ಅಂದಾಜು 2ಕಿ.ಮೀ ವರೆಗೆ 2ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾದ 96 ಕ್ರಾನಿಕಲ್ ವಿದ್ಯುತ್‍ದೀಪಳನ್ನು ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿ, ಈ ಭಾಗದ ಜನರು ಮೂಲ ಸೌಕರ್ಯ ಇಲ್ಲದೆ ಸಾಕಷ್ಟು ಪರದಾಡುವ ಪರಿಸ್ಥಿತಿ ಇತ್ತು. ಇಂದು ಮಂಟೂರು ಭಾಗಕ್ಕೆ ನೂರಾರು ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ. ಜನರು ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ನನಗೆ ಸತತವಾಗಿ ಆಶೀರ್ವಾದ ಮಾಡಿದ್ದಾರೆ. ಅವರಿಗೆ ನಾನೆಂದು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ವಿರೋಧಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ, ಪಾಲಿಕೆ ಮಾಜಿ ಸದಸ್ಯರಾದ ಸುಧಾ ಮಣಿಕುಂಟ್ಲ, ಬರ್ನಾಬಾಸ್ ಕೂಡಲಿ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಶರೀಫ್ ಅದ್ವಾನಿ, ಮುಖಂಡರಾದ ಜಾಫರ್ ಶಾಬ್ದಿ, ಶ್ರೀನಿವಾಸ ರಟ್ಟಿ, ಪಾಂಡು ಜಾಧವ, ಮುಸ್ತಾಕ್, ಜಾಫರ್ ಬ್ಯಾಳಿ, ಶ್ರೀನಿವಾಸ ಕೋದಡ್ಡಿ, ದಾವುದ್, ವಿವೇಕ, ರಮೇಶ, ಮಂಜುನಾಥ, ಲಕ್ಷ್ಮಣ ಭೊಜಗಾರ್ ಸೇರಿದಂತೆ ಮೊದಲಾದವರು ಇದ್ದರು.