
ದಾವಣಗೆರೆ.ಮಾ.೨೯: ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ಸುಮಾರು 19 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 32ನೇ ವಾರ್ಡಿನ ಅಂಬಿಕಾ ಬಡಾವಣೆಯ ರಸ್ತೆಗೆ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಯನ್ನು ಗುದ್ದಲಿ ಪೂಜೆ ಮಾಡುವುದರ ಮೂಲಕ ಎಸ್‌ಸಿ ರವೀಂದ್ರನಾಥ್ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ನೆರವೇರಿಸಿದರು. ಆದಷ್ಟು ಬೇಗ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಯನ್ನು ಮುಗಿಸುವಂತೆ ಗುಣಮಟ್ಟದ ದೀಪಗಳನ್ನು ಹಾಕಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಅಂಬಿಕಾ ಬಡಾವಣಿಗೆ ಹೋಗುವ ದಾರಿಗೆ ಪದ್ಮಭೂಷಣ ಡಾ.ರಾಜಕುಮಾರ್ ರಸ್ತೆ ಎಂದು ನಾಮ ಫಲಕವನ್ನು ಶಾಸಕರು ಅನಾವರಣ ಮಾಡಿದರು.ಶಕ್ತಿನಗರದ ವೃತ್ತಕ್ಕೆ ಗಂಗಾ ಪುತ್ರ ಭೀಷ್ಮ ಬಗ್ಗೆ ವೃತ್ತ ಎಂದು ನಾಮಕರಣ ಮಾಡಲಾಯಿತು. ಭಗೀರಥ ವೃತ್ತದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ನಾಮಪಲಕವನ್ನು ಅನಾವರಣ ಮಾಡಿದರು. ಈ ವೇಳೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ.ಪ್ರಕಾಶ್, ಮಾಜಿ ಮೇಯರ್ ಹಾಗೂ ಮಹಾನಗರ ಪಾಲಿಕೆಯ ಸದಸ್ಯೆ ಉಮಾ ಪ್ರಕಾಶ್, ಭಾರತೀಯ ಜನತಾ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ್ ಹನುಮಂತಪ್ಪ, ಯು.ರಾಜೇಂದ್ರ, ಮಂಜುನಾಥ್, ಅಣ್ಣಪ್ಪ, ವಾಸುದೇವ್ ಸಾಕ್ರೆ, ಯೋಗರಾಜ್, ಮಾಯಕೊಂಡ ಮಂಜುನಾಥ್, ಗುತ್ತೂರು ಮಂಜುನಾಥ್, ಶಶಿಕುಮಾರ್ ಇತರರು ಇದ್ದರು.