ವಿದ್ಯುತ್ ದರ ಹೆಚ್ಚಳ: ವಾಪಾಸ್ ಗೆ ಸುರ್ಜೇವಾಲ ಆಗ್ರಹ

ನವದೆಹಲಿ/ ಬೆಂಗಳೂರು, ನ. 5- ಕೋರೋನಾ ಸೋಂಕಿನಿಂದ ಜನರು ಸಮಸ್ಯೆಗೆ ಸಿಲುಕಿರುವಾಗ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಸರಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು‌ ಕರ್ನಾಟಕ ಸರ್ಕಾರ ಕೂಡಲೇ ದರ ಪರಿಷ್ಕರಣೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ

ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರ, ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ.
ಈ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ವಿದ್ಯುತ್ ದರವನ್ನು ಏಕಾಏಕಿ ಪ್ರತಿ ಯುನಿಟ್‌ಗೆ 40 ಪೈಸೆಯಷ್ಟು ಹೆಚ್ಚಿಸಿರುವುದು ಸರಿಯಲ್ಲ ಎಂದಿದ್ದಾರೆ.

ವಿದ್ಯುತ್ ಕಂಪನಿಗಳ ಒತ್ತಾಯದ ಮೇರೆಗೆ ನಿನ್ನೆಯಷ್ಟೇ ಪ್ರತಿ ಯೂನಿಟ್ ಗೆ ಸರಾಸರಿ 40 ಪೈಸೆ ಹೆಚ್ಚಳ ಮಾಡಲಾಗಿತ್ತು.

ಸಿದ್ದು ಆಕ್ಷೇಪ:

ಈ ನಡುವೆ ಚಿತ್ರದರ್ಗುದಲ್ಲಿ ಮಾತನಾಡಿದ ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಯಮ್ಮ ಕೊರೋನಾ ಸೋಂಕಿನ ಸಮಯದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ‌

ಕೊರೋನಾ ಸೋಂಕಿನ ಸಮಯದಲ್ಲಿ ದರ ಹೆಚ್ಚಳ‌ ಸರಿಯಲ್ಲ ಎಂದಿದ್ದಾರೆ