ಲಕ್ಷ್ಮೇಶ್ವರ,ಜೂ9: ಸರ್ಕಾರ ಅಸ್ತಿತ್ವದಲ್ಲಿ ಇಲ್ಲದಾಗ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗ ಕೆ.ಈ.ಆರ್.ಸಿ. ವಿದ್ಯುತ್ ಸರಬರಾಜು ಸಂಸ್ಥೆಗಳ ಬೇಡಿಕೆ ಹಿನ್ನೆಲೆಯಲ್ಲಿ ಏಕಾಏಕಿ ವಿದ್ಯುತ್ ದರ ಹೆಚ್ಚಿಸಿರುವುದು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಹೆಸ್ಕಾಂ ಉಪ ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೆ ಪ್ರವೀಣ ಶೆಟ್ಟಿ ಬಣದ ತಾಲೂಕ ಘಟಕದ ಅಧ್ಯಕ್ಷ ಮಹೇಶ್ ಕಲಘಟಗಿಯವರು ವಿದ್ಯುತ್ ಕಂಪನಿಗಳು ಏಕಾಏಕಿ ಇದು ದರಗಳನ್ನು ಏರಿಸಿ ಗ್ರಾಹಕರಿಗೆ ಮೋಸ ಮಾಡಿವೆ ಈ ತಿಂಗಳಿನಲ್ಲಿ 800 ಕಟ್ಟಿದವರು ಈ ತಿಂಗಳಬಿಲಿನಲ್ಲಿ 1600 ರೂಗೆ ಹೆಚ್ಚಿಸಿರುವುದು ಅತ್ಯಂತ ಖಂಡನೀಯ. ಸರ್ಕಾರ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ಉಚಿತ ವಿದ್ಯುತ್ ನೀಡುವ ನೆಪದಲ್ಲಿ ಈ ತಿಂಗಳವೇ ಸಾವಿರಾರು ಕೋಟಿರುವ ಹಣವನ್ನು ಗ್ರಾಹಕರ ಜೀವಿಗೆ ಕತ್ತಲೆ ಹಾಕಿದೆ ಇದನ್ನು ಯಾರು ಸಹಿಸಲು ಸಾಧ್ಯವಿಲ್ಲ ಉಚಿತ ವಿದ್ಯುತ್ ಕೇಳದಿದ್ದರೂ ರಾಜಕೀಯ ದುರುದ್ದೇಶದಿಂದ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಈ ರೀತಿ ಮೋಸ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಜನರಿಗೆ ಬಿಲ್ ತುಂಬದಂತೆ ಚಳುವಳಿ ನಡೆಸುವದಾಗಿ ಹೇಳಿದರಲ್ಲದೆ ಅಭಿವೃದ್ಧಿ ಕೆಲಸಗಳನ್ನು ಮಾಡಿ ಅಂದಾಗ ನೀತಿ ಸಂಹಿತೆ ನೆಪ ಹೇಳಿ ಈಗ ಮೇ 12ರಂದು ನೀತಿ ಸಂಹಿತೆ ಜಾರಿ ಇದ್ದಾಗ ಕೆ.ಈ.ಆರ್..ಸಿ. ಆದೇಶ ಮಾಡಿ ಉಲ್ಲಂಘನೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಇಂಧನ ಖಾತೆ ಸಚಿವರು ಈ ಹಗಲು ದರೋಡೆಯನ್ನು ತಡೆಗಟ್ಟಬೇಕು ಎಂದು ಈಗ ನಾವು ಕಳೆದ ತಿಂಗಳು ಒತ್ತಾಯಿಸಿದ್ದಾರೆ. ಇಂಧನ ವೆಚ್ಚ ಸರಿದೂಗಿಸಲು ಕರ್ನಾಟಕ ವಿದ್ಯುತ್ ರೆಗುಲೇಟಿಂಗ್ ಕಮಿಷನ್ ಗೆ ವಿದ್ಯುತ್ ನಿಗಮಗಳು ಮನವಿ ಸಲ್ಲಿಸಿದವು ಈ ಹಿನ್ನೆಲೆಯಲ್ಲಿ ಜೂನ್ ತಿಂಗಳ ಬಿಲ್ಲಿನಲ್ಲಿ 55 ಪೈಸೆಯ ಬದಲಾಗಿ ಎರಡು ರೂಪಾಯಿ 55 ಪೈಸೆ ಎಂದು ಯುನಿಟಿಗೆ ಅನುಗುಣವಾಗಿ ಹೆಚ್ಚಳವಾಗಿರುವುದರಿಂದ ಬಿಲ್ಲು ಹೆಚ್ಚಿಗೆ ಬಂದಿದೆ ಎಂದು ಹೆಸ್ಕಾಂ ಉಪ ವಿಭಾಗದ ಪ್ರಭ ಎ ಇ ಇ ಗುರುರಾಜ್ ನಾಯಕ್ ನೀಡಿದರು
ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಅಂಬರೀಶ್ ಗಾಂಜಿ, ಪ್ರವೀಣ್ ದಶಮನಿ ,ತೇಜು ಉದ್ದನಗೌಡರ್, ಪ್ರವೀಣ್ ಭಜಂತ್ರಿ, ಕಿಶನ್ ಗೋಸಾವಿ, ಮಾಧವ್ ಗೋಸಾವಿ, ದಿನೇಶ್ ಗೋಸಾವಿ, ವಿಶ್ವ ಗೋಸಾ,ವಿ ಗೋಪಿ ಗೋಸಾವಿ, ವೆಂಕಟೇಶ್ ಗೋಸಾವಿ, ಬಸನಗೌಡ ಮನ್ನಂಗಿ, ಶ್ರೀನಿವಾಸ ಗೋಸಾವಿ ಮತ್ತಿತರು ಇದ್ದರು.