ವಿದ್ಯುತ್ ದರ ಹೆಚ್ಚಳ ಖಂಡನೀಯ

ರಾಯಚೂರು,ಜ.೧೮- ರಾಯಚೂರಿನಲ್ಲಿ ಸೋಲಾರ್ ಸಿಸ್ಟಮ್ ಅನ್ನು ಇಂಡಸ್ಟ್ರಿಗಳಲ್ಲಿ ಅಳವಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ ಲಕ್ಷ್ಮರೆಡ್ಡಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡಿದ್ದು ಖಂಡನೀಯ. ಎಚ್. ಟಿ.-೨ಎ ಕೈಗಾರಿಕಾ ಸ್ಥಾವರಗಳಿಗೆ ನಿಗದಿತ ಶುಲ್ಕ ಮಾಸಿಕ ಪ್ರತಿ ಕೆ.ವಿ.ಎ.ಗೆ ಪ್ರಸ್ತುತ ರೂ.೨೬೫ ಇದ್ದು,ಈಗಿನ ಪ್ರಸ್ತಾಪಿತ ದರ ರೂ.೫೫೦ ಕ್ಕೆ ಹೆಚ್ಚಿಸಲಾಗಿದೆ ಆದರೆ ಮಾಸಿಕ ಪ್ರತಿ ಕೆವಿಎಗೆ ರೂ.೨೬೫ ರಂತೆ ಪಾವತಿಸುತ್ತಿದ್ದೇವೆ. ಈ ಹಿಂದೆ ರೂ.೨೬೫ ಪ್ರತಿ ಕೆ.ವಿ. ಎ.ಗೆ ಹೆಚ್ಚಳ ಮಾಡಿರುವ ಹಿನ್ನೆಲೆ ಕಾಟನ್ ಜಿನ್ನಿಂಗ್ ಫ್ಯಾಕ್ಟರಿಗಳು ಸೀಜನಲ್ ಇಂಡಸ್ಟ್ರಿಗಳಾಗಿರುವುದರಿಂದ ಬಹಳಷ್ಟು ಒರೆಯಾಗುತ್ತದೆ ಎಂದರು.
ಪ್ರತಿ ಕೆ.ಪಿ.ಎ.ಗೆ ಯಥಾಪ್ರಕಾರ ರೂ. ೨೬೫ ರಂತೆ ತೆಗೆದುಕೊಂಡು ಪ್ರತಿ ಯೂನಿಟ್‌ಗೆ ರೂ.೫.೮೫ ಪೈಸೆಯಂತೆ ಕೊಟ್ಟರೆ ಸೀಜನಲ್ ಕಾಟನ್ ಜೆನ್ನಿಂಗ್ ಫ್ಯಾಕ್ಟರಿಗಳಿಗೆ ಸಾಕಷ್ಟು ಸಹಾಯವಾಗುತ್ತದೆ.
ಪ್ರತಿ ಕೆ.ಪಿ.ಎ.ಗೆ ರೂ.೫೫೦ ರಂತೆ ಪಾವತಿಸುವಂತೆ ಒತ್ತಾಯಿಸಿದರೆ ನಮ್ಮ ಕಾಟನ್ ಜಿನ್ನಿಂಗ್ ಫ್ಯಾಕ್ಟರಿಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ. ಈ ರೀತಿ ಮಾಡುವುದರಿಂದ ಇಂಡಸ್ಟ್ರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ಹಾಗೂ ಕಾರ್ಮಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದರು.