ರಾಯಚೂರು, ಜೂ.೧೪- ಕೈಗಾರಿಕೆಗಳಿಗೆ ವಿದ್ಯುತ್ ಯುನಿಟ್ ದರ ಮತ್ತು ನಿಗದಿತ ಶುಲ್ಕವನ್ನು ಹೆಚ್ಚಿಸಿರುವುದು ಖಂಡನೀಯ ಎಂದು ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಶಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕೆ. ಇ.ಆರ್.ಸಿ ರವರು ಮೇ.೧೨ ರಂದು ಹೊರಡಿಸಿರುವ ಆದೇಶದಿಂದ ಕೈಗಾರಿಕೆಗಳಿಗೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ ಎಂದ ಅವರು,
ನಿಗದಿತ ಶುಲ್ಕವನ್ನು (ಡಿಮ್ಯಾಂಡ್ ಚಾರ್ಜ್) ೧ ಕೆ.ವಿ.ಎ.ಗೆ ೨೬೫ ರೂಪಾಯಿಗಳು ಇತ್ತು. ಆದರೆ ಈಗ ಅದನ್ನು ೩೫೦ ರೂಗಳವರೆಗೆ ಏರಿಸಿದ್ದಾರೆ ಅಂದರೆ ೮೫ ರೂಪಾಯಿಗಳನ್ನು ಹೆಚ್ಚಳ ಮಾಡಿದ್ದಾರೆ.ಇದರಿಂದ ಎಲ್ಲಾ ಕೈಗಾರಿಕೆಗಳಿಗೆ ಭರಿಸಲಾಗದೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಫ್.ಸಿ.ಎ.ಸಿ ಚಾರ್ಜ್‌ನ್ನು ರೂ. ೦.೫೫ ಪೈಸೆ ಯಿಂದ ರೂ. ೨.೬೪ ಏರಿಸಿದ್ದಾರೆ ಅಂದರೆ ೨.೦೯ ಪೈಸೆ ೧ ಯುನೀಟ್‌ಗೆ ಹೆಚ್ಚಿಗೆ ಮಾಡಿದ್ದಾರೆ ಇದ್ದರಿಂದ ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯುತ್ ದರವನ್ನು ಹೆಚ್ಚಿಸಿದ್ದಾರೆ ಇದರಿಂದ ನಮ್ಮಲ್ಲಿನ ಕೈಗಾರಿಕೆಗಳು ಮುಚ್ಚಲ್ಪಡುತ್ತವೆ. ಹಾಗೂ ಇಲ್ಲಿ ಬೆಳೆದ ಭತ್ತ, ಹತ್ತಿ, ಕೃಷಿ ಉತ್ಪಾದನೆಗಳು ಹೊರ ರಾಜ್ಯಗಳಿಗೆ ಮಾರಾಟವಾಗುತ್ತದೆ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆ ಸಿಗುವುದಿಲ್ಲ ಎಂದರು.
ಕೈಗಾರಿಕೆಗಳಿಗೆ ವಿದ್ಯುತ್ ದರ ಹಾಗೂ ನಿಗದಿತ ಶುಲ್ಕಗಳನ್ನು ಅತಿ ಹೆಚ್ಚು ಏರಿಕೆ ಮಾಡುವುದರಿಂದ ಉತ್ಪಾದನೆಗಳ ಬೆಲೆ ಏರಿಕೆಯಾಗಲು ಅವಕಾಶವಾಗುತ್ತದೆ.
ಜಿಲ್ಲೆಯ ಕೈಗಾರಿಕೆಗಳಿಂದ ಹಲವು ಉದ್ಯೋಗಿಗಳಿಗೆ ಉದ್ಯೋಗಗಳು ಲಭಿಸುತ್ತಿವೆ ಇವುಗಳು ನಷ್ಟಹೊದಿದರೆ ಈ ಕೈಗಾರಿಕೆಗಳನ್ನು ಅವಲಂಬಿಸಿ ಬದುಕುತ್ತಿರುವ ಸಾವಿರರು ಉದ್ಯೋಗಿಗಳು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ.ಇತ್ತೀಚೆಗೆ ಉದ್ಯಮಗಳ ಯಂತ್ರೋಪಾಕರಣಗಳು ಹಾಗೂ ಅದರ ಬಿಡಿ ಭಾಗಗಳ ಬೆಲೆ ಏರಿಕೆಯಾಗುತ್ತಲೇ ಹೋಗುತ್ತದೆ. ಅಲ್ಲದೆ ಇದಕ್ಕೆ ಸರಕು ಸೇವಾ ತೆರಿಗೆ ೫ ರಿಂದ ಗಿರಣಿಗಳಿಗೆ ತುಂಬಾ ನಷ್ಟವಾಗುತ್ತದೆ ಎಂದರು.
ದರ ಏರಿಕೆಯಿಂದ ಉಧ್ಯಮಿಗಳು ತಮ್ಮ ಉದ್ದಿಮೆಯನ್ನು ಮುಚ್ಚಿ ಬ್ಯಾಂಕ್‌ಗಳ ಸಾಲವನ್ನು ಕಟ್ಟಲಾರದೆ ಎಲ್ಲಾ ರೀತಿಯ ಆರ್ಥಿಕ ನಷ್ಟವನ್ನು ಹೊಂದುವ ಪರಿಸ್ಥಿತಿ ಬರುತ್ತದೆ ಹಾಗೂ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ.ಆದ್ದರಿಂದ ಸರ್ಕಾರವು ಈ ಅಂಶವನ್ನು ಗಮನಿಸಿ ವಿದ್ಯುತ್ ಯುನಿಟ್ ದರ ಹಾಗೂ ನಿಗದಿತ ಶುಲ್ಕವನ್ನು ಹೆಚ್ಚಳ ಮಾಡದೆ ಕೈಗಾರಿಕೆಗಳ ಅಸ್ತಿತ್ವವನ್ನು ಕಾಪಾಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು.
ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ರೆಡ್ಡಿ,ಸ ಸಾವಿತ್ರಿ ಪುರುಷೋತ್ತಮ,ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.