ವಿದ್ಯುತ್ ದರ: ಯಥಾಸ್ಥಿತಿಗೆ ಮನವಿ

ಬೀದರ,ಮೇ 16: ವಿದ್ಯುತ್ ದರವನ್ನು ಪರಿಷ್ಕರಣೆಗೆಒಳಪಡಿಸದೆ ಯಥಾಸ್ಥಿತಿಯಲ್ಲಿ ಮುಂದುವರೆಸುವಂತೆ ಬೀದರ ವಾಣಿಜ್ಯ ಮತ್ತು ಕೈಗಾರಿಕಾಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಮತ್ತು ಕಾರ್ಯದರ್ಶಿ ಡಾ. ವಿರೇಂದ್ರ ಶಾಸ್ತ್ರಿ ಅವರು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದ್ದಾರೆ.ಈ ಕುತಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ 2023 ರಲ್ಲಿ ಕರ್ನಾಟಕ ವಿದ್ಯುಚ್ಛÀಕ್ತಿನಿಯಂತ್ರಣ ಆಯೋಗವು ವಿದ್ಯುತ್ ದರವನ್ನು ಹೆಚ್ಚಿಸಿತ್ತು.(ಜೆಸ್ಕಾಂ) ಅದರ ಹೊಡೆತದಿಂದ ಚೇತರಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ.ವಿದ್ಯುತ್ ದರವನ್ನು ಏರಿಕೆ ಮಾಡಿ ಕೆಲವೇ ತಿಂಗಳುಗಳಮಾತ್ರ ಆಗಿದ್ದು ಮತ್ತೆ ಏಪ್ರಿಲ್ 1 ರಿಂದಪೂರ್ವಾನ್ವಯವಾಗುವಂತೆ ವಿದ್ಯುತ್ ದರವನ್ನು ಹೆಚ್ಚಿಸಿಆದೇಶವನ್ನು ಜಾರಿಮಾಡಿದೆ. ಇದು ತುಂಬಾ ಅವೈಜ್ಞಾನಿಕವಾದ,
ಸಮಯೋಚಿತವಲ್ಲದ ಖಂಡನೀಯವಾದ ಸಂಗತಿಯಾಗಿದೆ.
ಆಯೋಗವು ನಗರಪ್ರದೇಶಗಳಲ್ಲಿ ಪ್ರತಿ ಯುನಿಟ್‍ಗೆ 70 ಪೈಸೆ ಹಾಗುಗ್ರಾಮೀಣ ಪ್ರದೇಶಗಳಲ್ಲಿ 40 ಪೈಸೆಯಂತೆ ದರವನ್ನುಹೆಚ್ಚಳ ಮಾಡಿದೆ.ಗ್ರಾಹಕರಿಂದ ಹಾಗು ಸರ್ಕಾರದವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್‍ಮೊತ್ತವನ್ನು ತುರ್ತು ಕ್ರಮಗಳ ಮೂಲಕ ವಸೂಲಿಮಾಡಿ ಇಂಧನ ಇಲಾಖೆಯ ಆರ್ಥಿಕ ಸಂಪನ್ಮೂಲಗಳನ್ನುಸದೃಡಗೊಳಿಸಬೇಕು ಹಾಗು ಆರ್ಥಿಕ ವ್ಯವಸ್ಥೆಯನ್ನುಸರಿದೂಗಿಸಕೊಳ್ಳಬೇಕೆ ಹೊರತು ರಾಜ್ಯದ ಜನರನ್ನುಬಲಿಪಶುಗಳನ್ನಾಗಿ ಮಾಡÀಬಾರದು. ವಿದ್ಯುತ್ ದರವನ್ನುಪರಿಷ್ಕರಣೆಗೆ ಒಳಪಡಿಸದೆ ಯಥಾಸ್ಥಿತಿಯಲ್ಲಿಮುಂದುವರೆಸಿ ಜೊತೆಗೆ ಸರ್ಕಾರವು ನೀಡುವರಿಯಾಯಿತಿಯನ್ನು ಸಹ ಹೆಚ್ಚಿಸಬೇಕೆಂದು ಕೋರಿದ್ದಾರೆ.