ಕೋಲಾರ,ಜೂ,೧೫-ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ಅನುಮೋದಿತವಾಗಿ ೨೦೨೩ರ ಏಪ್ರಿಲ್ ತಿಂಗಳಲ್ಲಿ ಏರಿಕೆಯಾದ ವಿದ್ಯುತ್ ದರವು ಪೂರ್ವನ್ವಯವಾಗುವಂತೆ ಮೇ ೧೨ ರಂದು ಆದೇಶ ಹೊರಡಿಸಲಾಗಿದೆ ಬೆಸ್ಕಾಂ ಮೂಲಗಳು ತಿಳಿಸಿವೆ,
ರಾಜ್ಯದ ಗೃಹ ಬಳಿಕೆ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಹೊಸ ಆದೇಶದ್ವನಯ ಪ್ರತಿ ಯೊನಿಟ್‌ಗೆ ೭೦ ಪೈಸೆ ವಿದ್ಯುತ್ ದರ ಏರಿಕೆಯಾಗಿದೆ. ಆ ಪರಿಷ್ಕೃತ ದರವನ್ನು ಜೂನ್ ತಿಂಗಳ ಬಿಲ್‌ನಲ್ಲಿ ಸೇರ್ಪಡೆ ಮಾಡಿರುವುದರಿಂದ ಬಿಲ್‌ಗಳ ಮೊತ್ತ ಅಧಿಕವಾಗಿ ಬರುತ್ತಿದೆ.
೨೦೨೩ ಏಪ್ರಿಲ್ ೧ ರಿಂದ ಪೂರ್ವಾನ್ವಯವಾಗುವಂತೆ ದರ ಏರಿಕೆ ಆದೇಶ ಹೊರಡಿಸಿರುವುದರಿಂದ ಬಾಕಿ ಬಿಲ್ ಮೊತ್ತವನ್ನು ಜೂನ್ ತಿಂಗಳಿನ ವಿದ್ಯುತ್ ಬಿಲ್‌ನೊಂದಿಗೆ ಸೇರಿಸಿ ಸಂಗ್ರಹಿಸಲಾಗುತ್ತಿದೆ. ನಿಗಧಿತ ಶುಲ್ಕವನ್ನು ಗೃಹ ಬಳಕೆಗೆ ೧೦೦ ಕಿ.ವ್ಯಾ,ಗೆ ೧೦೦ ರಿಂದ ೧೧೦ ರೂವರೆಗೆ ಏಪ್ರಿಲ್ ೧ ರಿಂದ ಪೂರ್ವಾನ್ವಯವಾಗುವಂತೆ ಕೆ.ಇ.ಆರ್.ಸಿ ಪರಿಷ್ಕತ ದರ ನಿಗಧಿ ಪಡೆಸಿದೆ.
ಕಳೆದ ತಿಂಗಳವರೆಗೆ ವಿವಿಧ ವರ್ಗದ ಇಂಧನ ಶುಲ್ಕವನ್ನು ಲೆಕ್ಕಹಾಕಲಾಗುತ್ತಿತ್ತು. ೦ ಯಿಂದ ೫೦, ೫೧ ರಿಂದ ೧೦೦, ೧೦೧ ರಿಂದ ೨೦೦ ಹಾಗೂ ೨೦೦ ಕ್ಕಿಂತ ಹೆಚ್ಚು ಯೂನಿಟ್ ಎಂದು ವರ್ಗವಾರು ದರ ವಿದ್ಯುತ್ ಬಿಲ್‌ನಲ್ಲಿ ನಮೂದಾಗುತ್ತಿತ್ತು, .ಅದರೆ ಈಗ ಕೆ.ಇ.ಆರ್.ಸಿ. ಯಿಂದ ಟೆಲಿಸ್ಕೋಪಿಕ್ ದರಗಳು ಅನುಮೊದನೆಯಾಗಿದೆ ಇದಾರರ್ಥ ಗ್ರಾಹಕ ೦ ಯಿಂದ ೧೦೦ ಯೂನಿಟ್ ಬಳಿಸಿದರೆ ಪ್ರತಿ ಯೂನಿಟ್ ವಿದ್ಯುತ್‌ಗೆ ೪.೭೫ ರೂನಂತೆ ಶುಲ್ಕ ವಿಧಿಸಲಾಗುತ್ತಿದೆ. ಆದರೆ ೧೦೦ ಯೂನಿಟ್ ಬಳಿಸಿದರೆ ೦ ಯೂನಿಟ್ ನಿಂದಲೂ ಪ್ರತಿ ಯೂನಿಟ್‌ಗೆ ೭ ರೂ ನಂತೆ ಕಡೇ ಯೂನಿಟ್‌ವರೆಗೂ ಲೆಕ್ಕ ಹಾಕಲಾಗುತ್ತಿದೆ.
ಥರ್ಮಲ್ ಮತ್ತು ಡೀಸೆಲ್ ಪ್ಲಾಂಟ್‌ಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಳಿಸುವ ಕಲ್ಲಿದ್ದಲು ಮತ್ತು ಡೀಸೆಲ್ ದರದಲ್ಲಿ ವ್ಯತ್ಯಾಸವಾಗುವ ಶುಲ್ಕವನ್ನು ಫ್ಯೋಯಲ್ ಆಡ್ಜೆಸ್ಟ್‌ಮೆಂಟ್ ಚಾರ್ಜಸ್ ಅಗಿ ಸಂಗ್ರಹಿಸಲಾಗುತ್ತಿದೆ. ಅದನ್ನು ಈಗ ಲೆಕ್ಕ ಹಾಕಿ ಮೂರು ತಿಂಗಳ ಬಾಕಿಯನ್ನು ಪ್ರಸ್ತುತ ತಿಂಗಳ ಬಿಲ್‌ನಲ್ಲಿ ಸೇರಿಸಲಾಗುತ್ತಿದೆ. ಅದರಂತೆ ನಾವು ಕಳೆದ ತಿಂಗಳವರೆಗೆ ಪ್ರತಿ ಯೂನಿಟ್‌ಗೆ ೦.೫೩ ಪೈಸೆಯಂತೆ ಸಂಗ್ರಹಿಸಲಾಗುತ್ತಿತ್ತು ಅದರೆ ಎಫ್.ಎ.ಸಿ.ಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾಸ್ತಿಯಾಗಿದ್ದು, ಜೂನ್ ತಿಂಗಳ ಬಿಲ್‌ನಲ್ಲಿ ಅದು ೨.೪೨ ರೂನಂತೆ ನಮೂದಾಗಿದೆ
ಸೋಲಾರ್ ರಿಯಾಯಿತಿ ರದ್ದು-
ಸೋಲಾರ್ ಯೂನಿಟ್ ಅಳವಡಿಸಿ ಕೊಂಡಿರುವ ಗ್ರಾಹಕರಿಗೆ ನೀಡುತ್ತಿದ್ದ ೫೦ ರೂ ರಿಯಾಯಿತಿ ಈಗಾ ಹಿಂಪಡೆದಿದೆ. ಸರ್ಕಾರ ೨೦೦ ಯೂನಿಟ್‌ವರೆಗೆ ವಿದ್ಯುತ್‌ನ್ನು ಉಚಿತವಾಗಿ ನೀಡುತ್ತಿರುವುದರಿಂದ ಬಿಲ್‌ನಲ್ಲಿ ೫೦ ರೂ ರಿಯಾಯಿತಿ ನೀಡುವ ಪ್ರಶ್ನೆಯೇ ಬರುವುದಿಲ್ಲ. ೨೦೦ ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ೨೫೦೦ ರೂಗಿಂದ ೩೦೦೦ ರೂಗಳ ವರೆಗೆ ಬಿಲ್ ಬಂದರೆ ಅವರಿಗೆ ೫೦ ರೂ ರಿಯಾಯಿತಿ ನೀಡಿದರೆ ಅರ್ಥವಿಲ್ಲದಾಗಿದೆ ಅದ್ದರಿಂದ ಸೋಲಾರ್ ರಿಯಾಯಿತಿಯನ್ನು ರದ್ದು ಪಡೆಸಲಾಗಿದೆ ಎನ್ನಲಾಗಿದೆ.