ವಿದ್ಯುತ್ ದರ ಏರಿಕೆ ಹಿಂಪಡೆಯಿರಿ

ಬೀದರ:ಜೂ.11: ರಾಜ್ಯ ಸರ್ಕಾರ ಏರಿಕೆ ಮಾಡಿರುವ ವಿದ್ಯುತ್ ದರ ಕೈಬಿಡುವಂತೆ ಬೀದರ್ ವಾಣಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.

ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದಲ್ಲಿ ತಿಳಿಸಿದ ಅವರು ಪ್ರಕಟಣೆ ಬಿಡುಗಡೆ ಮಾಡಿ ಈ ಮಾಹಿತಿ ನೀಡಿದರು.

ರಾಜ್ಯದ ಜನರು ಕರೋನಾ ಮಹಾಮಾರಿಯ ಎರಡನೆಯ ಹೊಡೆತಕ್ಕೆ ಸಿಲುಕಿ ಅದರಿಂದ ಹೊರ ಬರಲಾರದೇ ಪರಿತಪಿಸುತ್ತಿದ್ದಾರೆ. ದೇಶದ ಪ್ರತಿಯೊಂದು ವಲಯವು ಕರೋನಾದ ಪ್ರಭಾವಕ್ಕೆ ಒಳಗಾಗಿ ಜರ್ಜರಿತÀಗೊಂಡಿವೆ. ಆಯಾ ವಲಯಗಳು ತನ್ನದೆ ಆದ ಪರಿವ್ಯಾಪ್ತಿಯಲ್ಲಿ ಹತ್ತು-ಹಲವಾರು ಸಮಸ್ಯೆಗಳನ್ನು ಎದುರಿಸಿ ಅದರಿಂದ ಹೊರಬರಲಾರದೆ ತನ್ನ ಉದ್ದಿಮೆಗಳನ್ನು ಹಾಗು ವ್ಯಾಪಾರ-ವಹಿವಾಟುಗಳನ್ನು ಸಂಪೂರ್ಣವಾಗಿ ಮುಚ್ಚಿ ಬೀದಿಗೆ ಬಂದಿರುವ ಹಲವಾರು ಜೀವಂತ ನಿದರ್ಶನಗಳಿವೆ. ಇಂತಹ ಕರೋನಾದÀ ಭೀಕರತೆಯ ಮಧ್ಯೆಯು ಸರ್ಕಾರ ವಿದ್ಯುತ್ ದರ ಹೆಚ್ಚಿಸಿರುವುದು ಸಮಯೋಚಿತವಾದ ನಿರ್ಧಾರವಾಗಿಲ್ಲ. ಇದು ಕರೋನಾ ಸಂಕಷ್ಟದಲ್ಲಿರುವ ಜನರಿಗೆ ತುಂಬಲಾರದ ನಷ್ಟವಾಗಿದ್ದು “ಗಾಯದ ಮೇಲೆ ಬರೆ ಎಳೆದಿರುವ ಕ್ರಮವಾಗಿದೆ” ಎಂದು ಖಂಡಿಸಿದೆ.

ಆದುದ್ದರಿಂದ ರಾಜ್ಯ ಸರ್ಕಾರವು ಎಲ್ಲಾ ವಲಯಗಳ ಹಿತಾಸಕ್ತಿ ಕಾಪಾಡುವದರ ಜೊತೆಗೆ ವಿಶೇಷವಾಗಿ ಕೈಗಾರಿಕೆಗಳಿಗೆ ಸಮರ್ಪಕ ರೀತಿಯಲ್ಲಿ ಸಂಪನ್ಮೂಲ ಒದಗಿಸುವುದು ಹಾಗು ಗುಣಮಟ್ಟದ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಿಕೊಡುವದರ ಜೊತೆಗೆ ಪರಿಷ್ಕøತ ವಿದ್ಯುತ್ ದರ ಕಡಿಮೆ ಮಾಡಿ ಯಥಾಸ್ಥಿತಿ ಕಾಪಾಡಿ ರಾಜ್ಯದ ಎಲ್ಲಾ ವರ್ಗದ ಹಾಗೂ ವಲಯಗಳ ಹಿತ ಕಾಪಾಡಬೇಕೆಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಕೇಂದ್ರದ ಅಧ್ಯಕ್ಷ ಬಿ.ಜಿ ಶಟಕಾರ, ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.