ನಿಡಗುಂದಿ :ಜೂ.15: ರಾಜ್ಯ ಸಕಾ9ರ ವಿದ್ಯುತ್ ದರ ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದೆ.ಅದನ್ನು ಹಿಂಪಡೆಯಬೇಕು ಎಂದು ನಿಡಗುಂದಿ ತಾಲೂಕಾ ರೈತ ಹಿತರಕ್ಷಣಾ ಸಂಘ ಆಗ್ರಹಿಸಿದೆ.
ವಿದ್ಯುತ್ ದರ ಏಕಾಏಕಿ ದುಪ್ಪಟ್ಟು ಹೆಚ್ಚಿಸಿದ್ದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ವಿದ್ಯುತ್ ಬಿಲ್ ದುಬಾರಿ ಶಾಕ್ ದಿಂದ ಜನತೆ ತತ್ತರಿಸಿ ರೋಶಿ ಹೋಗಿದ್ದಾರೆ. ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ವಿದ್ಯುತ್ ದರ ಏರಿಕೆಯನ್ನು ಇಳಿಸಬೇಕೆಂದು ಒತ್ತಾಯಿಸಿ ನಿಡಗುಂದಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಚಿತ್ತಾಪುರ ಮೂಲಕ ಇಂಧನ ಸಚಿವರಿಗೆ ಇಲ್ಲಿನ ತಾಲೂಕಾ ರೈತ ಹಿತರಕ್ಷಣಾ ಸಂಘ ಮನವಿ ಸಲ್ಲಿಸಿದೆ.
ಈ ವೇಳೆ ಮಾಜಿ ಕಾಡಾ ಅಧ್ಯಕ್ಷ ಬಸವರಾಜ ಕುಂಬಾರ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ತಿರುಪತಿ ಬಂಡಿವಡ್ಡರ,ಮಾಜಿ ಪಿಕೆಪಿಎಸ್ ಅಧ್ಯಕ್ಷ ಸಂಗಣ್ಣ ಕೋತಿನ, ನಿಡಗುಂದಿ ಪಪಂ ಸದಸ್ಯ ಪ್ರಲಾದ ಪತ್ತಾರ,ಪ್ರಮುಖರಾದ ಜಿ.ಎಚ್.ವಡ್ಡರ, ವಿಜಯಲಕ್ಷ್ಮಿ ಮುಚ್ಚಂಡಿ, ಲಕ್ಷ್ಮೀ ಸಜ್ಜನ, ಗಿರಿಜಾ ಸಜ್ಜನ,ಕಸ್ತೂರಿ ರೇಶ್ಮಿ,ಭಾರತಿ ಕುಂಬಾರ, ಮಾನಂದ ಸಜ್ಜನ, ರುದ್ರಮ್ಮ ರೇಶ್ಮಿ,ಸುಮಂಗಲಾ ಸಜ್ಜನ, ಶ್ವೇತಾ ಮುಚ್ಚಂಡಿ,ಚಂದ್ರವ್ವ ಕುಂಬಾರ,ರೇಣುಕಾ ತೋನಶಾಳ ಸೇರಿದಂತೆ ಮೊದಲಾದವರಿದ್ದರು.
ಪೋಟೋ : ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಹಾಗೂ ಏರಿಸಿರುವ ದರ ಕೂಡಲೇ ಇಳಿಸುವಂತೆ ಆಗ್ರಹಿಸಿ ಇಂಧನ ಸಚಿವರಿಗೆ ನಿಡಗುಂದಿ ಹೆಸ್ಕಾಂ ಎ ಡಬ್ಲೂಇ ಎಸ್.ಎಸ್.ಚಿತ್ತಾಪುರ ಅವರ ಮೂಲಕ ನಿಡಗುಂದಿ ತಾಲೂಕು ರೈತ ಹಿತರಕ್ಷಣಾ ಸಂಘದ ಆಶ್ರಯದಲ್ಲಿ ಮನವಿಯೊಂದನ್ನು ಸಲ್ಲಿಸಲಾಯಿತು.