ವಿದ್ಯುತ್ ದರ ಏರಿಕೆ ವಿರೋಧಿಸಿ ಎಪಿಎಂಸಿ ವರ್ತಕರಿಂದ ಪ್ರತಿಭಟನೆ

ತಾಳಿಕೋಟೆ:ಜೂ.23: ರಾಜ್ಯ ಸರ್ಕಾರವು ದೀಡಿರನೇ ವಿದ್ಯುತ್ ದರ ದುಪ್ಪಟ್ಟು ಹೆಚ್ಚಳ ಮಾಡಿರುವದನ್ನು ಖಂಡಿಸಿ ತಾಳಿಕೋಟೆ ಅಡತ್ ಮರ್ಚಂಟ್ ಅಸೋಶೇಷನ್ ನೇತೃತ್ವದಲ್ಲಿ ವರ್ತಕರು ಗುರುವಾರರಂದು ತಮ್ಮ ವ್ಯಾಪಾರ ವೈಹಿವಾಟನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ವಿಧ್ಯುತ್ ದರ ಯಾವುದೇ ಮುನ್ಸೂಚನೆ ಇಲ್ಲದೇ ಮತ್ತು ದುಪ್ಪಟ್ಟು ಹೆಚ್ಚಳ ಮಾಡಿರುವದರಿಂದ ಹತ್ತಿ ಗಿರಣಿ, ಶೇಂಗಾ ಮಿಲ್, ತೊಗರಿ ಮಿಲ್ ಅಲ್ಲದೇ ಇನ್ನಿತರ ಮಿಲ್‍ಗಳ ವಿದ್ಯುತ್ ಬಿಲ್ಲು ಹೆಚ್ಚಳವಾಗುವದರಿಂದ ರೈತರಿಗೆ ಆರ್ಥಿಕವಾಗಿ ಬಹುದೊಡ್ಡ ಪೆಟ್ಟು ಬಿಳ್ಳಲಿದೆ ಅಡತಿ ಅಂಗಡಿಯಿಂದ ನೇರವಾಗಿ ಮಿಲ್‍ಗಳಿಗೆ ದಾಸ್ತಾನುಹೋಗುತ್ತಿರುವದರಿಂದ ಅವರು ದಾಸ್ತಾನಿನ ದರವನ್ನು ವಿದ್ಯುತ್ ಬಿಲ್ ಹೆಚ್ಚಳದಿಂದ ದರ ಕಡಿಮೆ ಮಾಡುವದರಿಂದ ರೈತರಿಗೆ ಸೂಕ್ತ ಬೆಲೆ ಸಿಗುವದಿಲ್ಲಾ ಮತ್ತು ವಿದ್ಯುತ್ ಬಿಲ್ ಏರಿಕೆಯಿಂದ ಎಲ್ಲ ನಾಗರಿಕರಿಗೂ ಹಾಗೂ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯವ್ಯವಹಾರಗಳಿಗೆ ಆರ್ಥಿಕ ಪೆಟ್ಟು ಬಿಳ್ಳಲಿದ್ದು ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕೆಂದು ಎಪಿಎಂಸಿ ವರ್ತಕರು ಸರ್ಕಾರಕ್ಕೆ ಒತ್ತಾಯಿಸಿದರು.
ಎಪಿಎಂಸಿ ಸಭಾಭವನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೇರವಣಿಗೆಯು ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಮೂಲಕ ಶಿವಾಜಿ ಮಹಾರಾಜ್ ವೃತ್ತ, ಮಹಾರಾಣಾ ಪ್ರತಾಪ ವೃತ್ತದ ಮೂಲಕ ತಹಶಿಲ್ದಾರ ಕಾರ್ಯಾಲಯಕ್ಕೆ ಬಂದು ತಹಶಿಲ್ದಾರ ಕಚೇರಿ ಸಿರಸ್ತೆದಾರ ಜೆ.ಆರ್.ಜೈನಾಪೂರ ಅವರಿಗೆ ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ಅಡತ್ ಮರ್ಚಂಟ್ ಅಸೋಶೇಷನ್ ವತಿಯಿಂದ ಕೈಗೊಂಡ ಪ್ರತಿಭಟನಾ ಮೇರವಣಿಗೆಯಲ್ಲಿ ಹಮಾಲರ ಸಂಘದಿಂದ ಬೆಂಬಲಸೂಚಿಸಲಾಯಿತು.
ಈ ಸಮಯದಲ್ಲಿ ಅಡತ್ ಮರ್ಚಂಟ್ ಅಸೋಶೇಷನ ಉಪಾಧ್ಯಕ್ಷ ಅಶೋಕ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಿ.ಎಸ್.ಯಾಳಗಿ, ಬಾಬು ಹಜೇರಿ, ಅಶೋಕ ಜಾಲವಾದಿ, ಆಯ್.ಬಿ.ಬಿಳೇಭಾವಿ, ನಾಗೇಶ ಡೋಣೂರಮಠ, ಈರಣ್ಣ ಕಲ್ಬುರ್ಗಿ, ಎಂ.ಬಿ.ಕುಂಭಾರ, ವಿಶ್ವನಾಥ ಬಿದರಕುಂದಿ, ಬಸ್ಸು ಪಂಚಗಲ್ಲ, ಚನಮಲ್ಲು ಕತ್ತಿ, ಈರಯ್ಯ ಮಠ, ನಾಗಪ್ಪ ಚಿನಗುಡಿ, ಜಗದೀಶ ಬಿಳೇಭಾವಿ, ಅಶೋಕ ಚಿನಗುಡಿ, ನಾರಾಯಣ ಸುಭೇದಾರ, ಎಸ್.ಸಿ.ಪಾಟೀಲ, ಒಳಗೊಂಡು ನೂರಾರು ವರ್ತಕರು ಇದ್ದರು.