ವಿದ್ಯುತ್ ದರ ಏರಿಕೆ – ನಾಚಿಕೆಗೇಡು

ರಾಯಚೂರು.ನ.07- ಕರ್ನಾಟಕ ಸರಕಾರ ರಾಜ್ಯಾದಂತಹ ವಿದ್ಯತ್ ದರಗಳನ್ನು ಏರಿಕೆ ಮಾಡಿರುವದು ಅತ್ಯಂತ ಖಂಡನೀಯವಾಗಿದೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ರಜಾಕ್ ಉಸ್ತಾದ್ ಅವರು ಹೇಳಿದರು.
ಕೋವಿಡ್-19 ಕಾರಣದಿಂದ ಈಗಾಗಲೇ ರಾಜ್ಯದ ಜನತೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ವಿದ್ಯುತ್ ದರವನ್ನು ಕಡಿಮೆ ಮಾಡಿದರೆ ಮಾರುಕಟ್ಟೆಯಲ್ಲಿ ಆರ್ಥಿಕ ಚೈತನ್ಯ ಬರುತ್ತದೆ. ಆದರೆ, ಸರಕಾರ ವಿವೇಚನಾರಹಿತವಾಗಿ ವಿದ್ಯುತ್ ದರಗಳನ್ನು ಏರಿಸಿರುವುದು ನಾಚಿಕೆಗೇಡಿನ ಸಂಗತಿ.
ರಾಜ್ಯದ ವಿವಿಧ ವಿದ್ಯುತ ಕಂಪನಿಗಳು ಗೃಹ ಬಳಕೆಗೆ ಪ್ರತಿ ಯುನಿಟ್‌ಗೆ 25 ಪೈಸೆ, ಕುಡಿಯುವ ನೀರಿಗೆ ಪ್ರತಿ ಯುನಿಟ್ ಒಂದಕ್ಕೆ 25 ಪೈಸೆ, ವಾಣಿಜ್ಯ ಬಳಕೆಗೆ ಪ್ರತಿ ಯುನಿಟ್‌ಗೆ 25 ಪೈಸೆ ಹಾಗೂ ಕೈಗಾರಿಕೆಗಳಲ್ಲಿ ಪ್ರತಿ ಯುನಿಟ್‌ಗೆ 30 ಪೈಸೆ ವಿದ್ಯುಚ್ಛಕ್ತಿ ದರವನ್ನು ಹೆಚ್ಚಿಗೆ ಮಾಡಿ ನವೆಂಬರ್ 2020 ರಿಂದ ಜಾರಿಗೆ ಆದೇಶಿಸಿರುವುದು ಬರ, ನೆರೆ, ಜಿಎಸ್‌ಟಿ, ನೋಟ್‌ಬ್ಯಾನ್, ಕೋವಿಡ್-19 ಲಾಕ್‌ಡೌನ್ ಕಾರಣಕ್ಕಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ, ಉದ್ಯೋವಿಲ್ಲದೇ, ನಿಯಮಿತ ಆದಾಯವಿಲ್ಲದೇ ಪರದಾಡುತ್ತಿರುವ ಜನರಿಗೆ ಸರಕಾರ ಬರೆ ಎಳೆದಂತಾಗಿದೆ. ವಿದ್ಯುತ್ ಕಂಪನಿಗಳು ಲಾಭದಾಯಕವಾಗಿ ನಡೆಯುವಂತಾಗಲು ಹಲವಾರು ಮಾರ್ಗಗಳಿವೆ.
ಮೊದಲು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾಲಂಬಿ ಸಾದಿಸಬೇಕು. ರಾಜ್ಯವು ಕಳೆದ ಹಲವು ವರ್ಷಗಳಿಂದ ಸೌರ, ಪವನ ಹಾಗೂ ಜಲ ಮೂಲದಿಂದ ಸಾಕಷ್ಟು ವಿದ್ಯುತ ಉತ್ಪಾದನೆ ಮಾಡುತ್ತಿದೆ. ವಿದ್ಯುತ ಉತ್ಪಾದನೆ ಹೆಚ್ಚಾಗಿದೆಯೆಂದು ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಳೆದ ಎಂಟು ತಿಂಗಳಿಂದ ವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆದರೂ ಕೇಂದ್ರ ಸರಕಾರದಿಂದ ಮತ್ತು ಖಾಸಗಿ ಕಂಪನಿಗಳಿಂದ ರಾಜ್ಯ ಸರಕಾರ ವಿದ್ಯುತ್‌ನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿರುವ ಮರ್ಮವಾದರೂ ಏನು.
ಸರಕಾರ ಆರ್ಥಿಕ ತೊಂದರೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದನ್ನು ಸರಿದೂಗಿಸಲು ಹಲವಾರು ಮಾರ್ಗಗಳಿದ್ದು, ಅವುಗಳನ್ನು ಅನುಸರಿಸುವ ಬದಲಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನರ ಮೇಲೆ ಆರ್ಥಿಕ ಹೊರೆ ಹೊರಿಸುವುದು ಅಕ್ಷಮ್ಯ ಅಪರಾಧ ಮತ್ತು ಜನಪರ ಸರಕಾರ ಮಾಡುವ ಕೆಲಸವಲ್ಲ. ಸರಕಾರದಲ್ಲಿ ಈಗಾಗಲೇ ಎಲ್ಲಾ ರೀತಿಯ ಆರ್ಥಿಕ ಮಿತವ್ಯಯ ಹೇರಿದ್ದು, ಇಂತಹ ಸಂದರ್ಭದಲ್ಲಿ ಮಿತಿಮೀರಿದ ಭ್ರಷ್ಟಾಚಾರವನ್ನು ತಡೆಯುವಂತ ಕೆಲಸ ಸರಕಾರ ಮಾಡಲಿ. ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಹಣವನ್ನು ಪಡೆಯಲು ಮತ್ತು ನೆರೆಯಿಂದ ಆಗಿರುವ ಹಾನಿಯ ಪರಿಹಾರ ಹಣವನ್ನು ಪಡೆಯಲು ತೀವ್ರ ಪ್ರಯತ್ನ ಮಾಡುವುದು, ಜನರಿಗೆ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲ.
ಕಾರಣ, ವಿದ್ಯುತ್ ದರ ಹೆಚ್ಚಿಗೆ ಮಾಡಿ ನವೆಂಬರ್ 2020 ರಿಂದ ಜಾರಿಗೆ ತರಲು ಮಾಡಿರುವ ಆದೇಶವನ್ನು ಸರಕಾರ ತಕ್ಷಣ ವಾಪಸ್ ಪಡೆಯಬೇಕು. ಇಲ್ಲದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಸರಕಾರಕ್ಕೆ ಒತ್ತಾಯಿಸುತ್ತೇವೆ.