ವಿದ್ಯುತ್ ದರ ಏರಿಕೆಗೆ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಖಂಡನೆ

ವಿಜಯಪುರ, ಜೂ.11-ರಾಜ್ಯದಲ್ಲಿ ಸೋಂಕಿಗೆ ಬಹುತೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರು ಅರ್ಧ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯುತ್ ಏರಿಕೆಯನ್ನು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲೀಕಾರ ತೀವ್ರ ಖಂಡಿಸಿದ್ದಾರೆ.
ಜನರಿಗೆ ಆರ್ಥಿಕ ಸಹಾಯ ನೀಡಬೇಕಾದ ಸಮಯದಲ್ಲಿ ಅವರಿಗೆ ಆರ್ಥಿಕ ಹೊರೆಯ ಬರೆ ನೀಡುವುದು ಸೂಕ್ತವಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೇರಳವಾಗಿದೆ.
ದೇಶಕ್ಕೆ ಉತ್ತಮ ದಿನಗಳು ಬರುತ್ತವೆ ಎಂಬ ಆಶಯ ನಿರಾಶೆಯಾಗಿದೆ. ಡೀಸೆಲ್ 50 ರೂ. ಪೆಟ್ರೋಲ್ 60 ರೂ. ಕಾಳು ಬೆಳೆಗಳು 60 ರೂ. ಒಳ್ಳೆಣ್ಣಿ 95 ರೂ ಹಳೆಯ ದಿನಗಳು ಬೇಕಾಗಿವೆ. ಲಾಕಡೌನದಲ್ಲಿ ದುಡಿಮೆಯಿಲ್ಲದೆ ಜನರು ಜೀವನ ನಡೆಸುವದು ಕಷ್ಠದಾಯಕ ಈ ಸಮಯದಲ್ಲಿ ಬೆಲೆ ಏರಿಕೆಯಿಂದ ಜೀವನ ದು:ಸ್ಥಿತಿಗೆ ಸಿಲುಕಿದೆ. ಮಧ್ಯಮ ವರ್ಗದವರು. ವಿದ್ಯಾವಂತ ನಿರುದ್ಯೋಗ ಯುವಕರು ಕಷ್ಟ ಜೀವನ ಎದುರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೆ ಬೆಲೆ ಕಡಿತಗೊಳಿಸಿ ಜನರ ಬದುಕು ಉಳಿಸಿ ಎಂದು ಹಾಸಿಂಪೀರ ವಾಲೀಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.