ವಿದ್ಯುತ್ ದರ ಇಳಿಸುವಂತೆ ತಾಕೀತು

ಸಂಜೆವಾಣಿ ನ್ಯೂಸ್
ಮೈಸೂರು.ಫೆ.15:- ವಿದ್ಯುತ್ ದರ ಏರಿಕೆ ಪ್ರಸ್ತಾಪ ಕೈ ಬಿಟ್ಟು ಇರುವ ದರವನ್ನೇ ಇಳಿಸಿ, ಅನಗತ್ಯ ವೆಚ್ಚ ನಿಲ್ಲಿಸಿ, ಪರ್ಯಾಯ ಆದಾಯ ಮೂಲಕ್ಕೆ ಆದ್ಯತೆ ನೀಡಿ. ಇದು ವಿದ್ಯುತ್ ದರ ಪರಿಷ್ಕರಣೆ ಪ್ರಯುಕ್ತ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಕೇಳಿ ಬಂದ ಸಲಹೆಗಳು.
ವಿದ್ಯುತ್ ದರವನ್ನು ಪ್ರತಿ ಯೂನಿಟ್‍ಗೆ 50 ಪೈಸೆ ಹೆಚ್ಚಳ ಮಾಡಬೇಕೆಂಬ ಸೆಸ್ಕ್ ಮಾಡಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ನಡೆದ ವಿಚಾರಣೆಯಲ್ಲಿ ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು, ಸೆಸ್ಕ್‍ನ ವಿದ್ಯುತ್ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದವು.
ಸಾರ್ವಜನಿಕರ ಮನವಿಗೆ ದನಿಗೂಡಿಸಿದ ಆಯೋಗದ ಅಧ್ಯಕ್ಷರು ಕೂಡ ಪ್ರತಿ ವರ್ಷ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆ ಏಕೆ ಮಂಡಿಸುತ್ತಿರುವುದಕ್ಕೆ ಆಯೋಗದ ಅಧ್ಯಕ್ಷರು ಕೂಡ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ಪರ್ಯಾಯ ಆದಾಯ ಮೂಲಗಳನ್ನು ಹುಡುಕವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯ ಆರಂಭದಲ್ಲಿ ಸೆಸ್ಕ್‍ನ ಎಂಡಿ ಜಿ.ಶೀಲಾ ಮಾತನಾಡಿ, 2024-25 ನೇ ಸಾಲಿನಲ್ಲಿ 7379.89 ಕೋಟಿ ರೂ. ವೆಚ್ಚವಾಗಲಿದ್ದುಘಿ, ವಿದ್ಯುತ್ ಬಿಲ್‍ನಿಂದಾಗಿ 6940.34 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದ್ದು, 439.55 ಕೋಟಿ ರೂ. ಸೆಸ್ಕ್‍ಗೆ ಹೊರೆಯಾಗುತ್ತಿದ್ದುಘಿ, ಅನಿವಾರ್ಯವಾಗಿ ಪ್ರತಿ ಯೂನಿಟ್‍ಗೆ 50 ಪೈಸೆ ದರವನ್ನು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ದರ ಹೆಚ್ಚಳ ಪ್ರಸ್ತಾಪ ಸಂಬಂಧ ಆಯೋಗದ ಅಧ್ಯಕ್ಷರು, ಅಹವಾಲು ಸ್ವೀಕರಿಸಿದರು.
ಸಾಕಷ್ಟು ಮಂದಿ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸುವುದರೊಂದಿಗೆ ಇರುವ ದರವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಸೆಸ್ಕ್‍ನಿಂದ ಗುಣಮಟ್ಟದ ಸೇವೆ ಸಿಗುತ್ತಿಲ್ಲಘಿಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲರ ಅಭಿಪ್ರಾಯ ಅನಿಸಿಕೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಅವರು, ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಆಯೋಗದ ಸದಸ್ಯ ಎಂ.ಡಿ.ರವಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಅಶೋಕ್ ಇದ್ದರು.