ವಿದ್ಯುತ್ ತಗುಲಿ ವಾಹನ ಚಾಲಕ ಸಾವು

ವಿಜಯಪುರ,ಜೂ.9: ಕೂಡಗಿ ಎನ್ ಟಿ ಪಿಸಿಯ ಬೂದಿ ತುಂಬಿಕೊಂಡು ಹೋಗಲು ಬಂದಿದ್ದ ಬಲ್ಕರ್ ವಾಹನದ ಚಾಲಕ ವಿದ್ಯುತ್ ಮೇನ್ ಲೈನ್ ತಗುಲಿ ಮೃತಪಟ್ಟಿರುವ ಘಟನೆ ಉಷ್ಣ ವಿದ್ಯುತ್ ಸ್ಥಾವರದ ಬಳಿಯ ಎಚ್ ಪಿ ಪೆಟ್ರೋಲ್ ಪಂಪ್ ಹತ್ತಿರ ಶನಿವಾರ ನಡೆದಿದೆ.
ಸಿಂದಗಿ ತಾಲೂಕಿನ ಕೋರವಾರ ಸಮೀಪದ ಮಲ್ಲಾಳ ತಾಂಡಾದ ವಿಶ್ವನಾಥ ಶೇವು ರಾಠೋಡ (24) ಮೃತಪಟ್ಟ ವಾಹನ ಚಾಲಕ ಎಂದು ಗುರುತಿಸಲಾಗಿದೆ..
ಚಾಲಕ ವಿಶ್ವನಾಥ ರಾಠೋಡ ವಾಹನದ ಮೇಲೆ ಹತ್ತಿದ ಸಂದರ್ಭದಲ್ಲಿ ಮೇನ್ ಲೈನ್ ತಾಗಿದೆ. ಆಗ ಆತನಿಗೆ ವಿದ್ಯುತ್ ಪ್ರವಹಿಸಿ ಸಾವನಪ್ಪಿದ್ದಾನೆ.
ಸ್ಥಳಕ್ಕೆ ಕೂಡಗಿ ಪೆÇೀಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.