
ಚಿಂಚೋಳಿ,ಮಾ 15: ತಾಲೂಕಿನ ಸೋಮಲಿಂಗದಳ್ಳಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಗ್ರಾಮದ ಮಲ್ಲಣ್ಣ ಗೊಲ್ಲೂರ್ ಎಂಬುವವರ ಮೇಕೆ ಸಾವನ್ನಪ್ಪಿದೆ.
ಶಾಲೆ ಮತ್ತು ಬಸ್‍ನಿಲ್ದಾಣ ಹತ್ತಿರ ಜನ ಸಂದಣಿ ಪ್ರದೇಶ ಇದ್ದರೂ ಜೆಸ್ಕಾಂ ಇಲಾಖೆಯವರು ಟ್ರಾನ್ಸ್ಫರ್ಮರ್ ಗಳಿಗೆ ತಡೆ ಬೇಲಿ ಇಲ್ಲದ ಕಾರಣದಿಂದಾಗಿ ಮೇಕೆಗೆ ವಿದ್ಯುತ್ ತಾಗಿ ಸಾವನ್ನಪ್ಪಿದ್ದು, ಇದಕ್ಕೆ ಜೆಸ್ಕಾಂ ಇಲಾಖೆ ಅಧಿಕಾರಿಗಳೇ ಹೊಣೆಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ .ಇದಕ್ಕೆ ಮುಂಚೆ ಚಿಂಚೋಳಿ ವಿಭಾಗದ ಅಧಿಕಾರಿಗಳಿಗೆ 4 ವರ್ಷ ಹಿಂದೆ ಗ್ರಾಮಸ್ಥರು ಟ್ರಾನ್ಸ್ಫರ್ಮರ್ ಗಳಿಗೆ ತಡೆ ಬೇಲಿ ಅಳವಡಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಜೆಸ್ಕಾಂ ಅಧಿಕಾರಿಗಳು ಟಿಸಿಗಳಿಗೆ ತಡೆಬೇಲಿ ಅಳವಡಿಸಿಲ್ಲ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಮೇಕೆಯ ಮಾಲೀಕರಿಗೆ ಪರಿಹಾರ ನೀಡಬೇಕು ಮತ್ತು ಗ್ರಾಮದಲ್ಲಿರುವ ಎಲ್ಲಾ ಟಿಸಿಗಳಿಗೆ ತಡೆ ಬೇಲಿ ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.